ರಾಯಚೂರು: 71ನೇಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಭಾಷಣ ಮಾಡುವ ವೇಳೆ ತಪ್ಪು ತಪ್ಪಾಗಿ ಕನ್ನಡ ಪದಗಳನ್ನ ಉಚ್ಛರಿಸಿದ ಪ್ರಸಂಗ ನಡೆಯಿತು.
ಗಣತಂತ್ರ ಭಾಷಣದಲ್ಲೂ ಶ್ರೀರಾಮುಲು ತಪ್ಪು ಉಚ್ಛಾರಣೆ: ಏನ್ರೀ ಸಚಿವರೇ, ನಿಮ್ಗೆ ಕನ್ನಡ ಬರಲ್ವಾ? - ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ
ಅಗಸ್ಟ್ 15 ಗಣರಾಜ್ಯೋತ್ಸವ ದಿನಾಚರಣೆ ಅಂದರು. ಮಾದರಿ ಬದಲು 'ಮಾಧುರಿ', ಆಜಾದ್‌ಗೆ 'ಆಜಾರ್', ಸ್ವಾತಂತ್ರ್ಯ ಬದಲಾಗಿ 'ಸ್ವಾಸಂತ್ರ' ಎಂದರು. ನಮ್ಮದು ವೈವಿಧ್ಯತೆ ಹೊಂದಿದ ದೇಶ. ಆದರೆ, ಸಚಿವರ ಭಾಷಣದಲ್ಲಿ 'ವೈವಿಧ್ಯತೆ ಇಲ್ಲದ ದೇಶ', ಸಾಮಾಜಿಕ ನ್ಯಾಯದ ಬದಲಾಗಿ 'ನಾಯಿ' ಎಂದು ಪದಗಳನ್ನ ಉಚ್ಛರಿಸಿರೋದು ಹಾಸ್ಯಾಸ್ಪದವಾಗಿತ್ತು.
ನಗರದ ಜಿಲ್ಲಾ ಪೊಲೀಸ್ ಡಿಆರ್ ಮೈದಾನದ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣ ಆರಂಭಿಸಿದ ಸಚಿವ ಬಿ.ಶ್ರೀರಾಮುಲು, ಆರಂಭದಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಬಳಿಕ ಭಾಷಣದುದ್ದಕ್ಕೂ ಕನ್ನಡ ಪದಗಳನ್ನ ತಪ್ಪಾಗಿ ಉಚ್ಛರಿಸಿದರು.
ಅಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಎನ್ನುವ ಬದಲು ಅಗಸ್ಟ್ 15 ಗಣರಾಜ್ಯೋತ್ಸವ ದಿನಾಚರಣೆ ಅಂದರು. ಮಾದರಿ ಎನ್ನುವ ಬದಲು 'ಮಾಧುರಿ', ಆಜಾದ್‌ಗೆ 'ಆಜಾರ್', ಸ್ವಾತಂತ್ರ್ಯ ಬದಲಾಗಿ 'ಸ್ವಾಸಂತ್ರ' ಎಂದುಬಿಟ್ಟರು. ನಮ್ಮದು ವೈವಿಧ್ಯತೆ ಹೊಂದಿದ ದೇಶ. ಆದರೆ, ಸಚಿವರ ಭಾಷಣದಲ್ಲಿ 'ವೈವಿಧ್ಯತೆ ಇಲ್ಲದ ದೇಶ', ಸಾಮಾಜಿಕ ನ್ಯಾಯದ ಬದಲಾಗಿ 'ನಾಯಿ' ಎಂದು ಪದಗಳನ್ನ ಉಚ್ಛರಿಸಿರೋದು ಹಾಸ್ಯಾಸ್ಪದವಾಗಿತ್ತು.