ರಾಯಚೂರು:ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್ ಮೇಲೆ ತೆರಳುತ್ತಿದ್ದವರು ಗಾಯಗೊಂಡ ಘಟನೆ ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಹೊಸಪೇಟೆಯಿಂದ ಜೇಗರಕಲ್ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯ ಈ ದುರ್ಘಟನೆ ಸಂಭವಿಸಿದೆ. ಜೇಗರಕಲ್ ಗ್ರಾಮದ ಗಂಗಮ್ಮ(43) ಮೃತ ಮಹಿಳೆಯಾಗಿದ್ದಾರೆ. ಗಂಗಮ್ಮ ಅವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಮರಳು ತುಂಬಿದ್ದ ಟಿಪ್ಪರ್ ಏಕಾಏಕಿ ಡಿಕ್ಕಿಯಾಗಿದೆ. ಗುದ್ದಿದ ರಭಸಕ್ಕೆ ಗಂಗಮ್ಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.