ಕರ್ನಾಟಕ

karnataka

ETV Bharat / state

ಪೊರಕೆ ಹಿಡಿದು ರಾಯಚೂರಿನ ಐತಿಹಾಸಿಕ ಬಾವಿ ಸ್ವಚ್ಚಗೊಳಿಸಿದ ಎಸ್ಪಿ

ಜನರ ಮೂಢನಂಬಿಕೆಗಳಿಗೆ ನಗರದ ಹೃದಯಭಾಗದಲ್ಲಿದ್ದ ಐತಿಹಾಸಿಕ ಬಾವಿಯೊಂದು ತನ್ನ ನಿಜ ರೂಪವನ್ನೇ ಕಳೆದುಕೊಂಡಿತ್ತು. ಇದನ್ನರಿತ ರಾಯಚೂರಿನ ಎಸ್ಪಿ ವೇದಮೂರ್ತಿ ಹಾಗೂ ಗ್ರೀನ್ ರಾಯಚೂರು ಸಂಘಟನೆಗಳ ಪದಾಧಿಕಾರಿಗಳು ಪೊರಕೆ ಹಿಡಿದು ಬಾವಿ ಸ್ವಚ್ಛಗೊಳಿಸಿದರು.

ಐತಿಹಾಸಿಕ ತೋಟದ ಬಾವಿ ಸ್ವಚ್ಛತಾ ಕಾರ್ಯಕ್ಕಾಗಿ ಪೊರಕೆ ಹಿಡಿದ ಎಸ್ಪಿ

By

Published : Sep 16, 2019, 5:06 AM IST

ರಾಯಚೂರು:ಸುತ್ತಮುತ್ತಲಿನ ಜನರು ಕಸ, ಪೂಜಾ ಸಾಮಗ್ರಿ ಹಾಕುತ್ತಿರುವುದರಿಂದ ನಗರದ ಐತಿಹಾಸಿಕ ತೋಟದ ಬಾವಿ ಸಂಪೂರ್ಣವಾಗಿ ಮಲಿನಗೊಂಡಿತ್ತು. ಗ್ರೀನ್ ರಾಯಚೂರು ಹಾಗೂ ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಾವಿಯ ಸ್ವಚ್ಛತಾ ಕಾರ್ಯ ನಡೆಯಿತು.

ಕಳೆದ ಹಲವಾರು ವರ್ಷಗಳಿಂದ ರಾಯಚೂರಿನ ವಾಸವಿ ನಗರದ ತೋಟದಬಾವಿಯಲ್ಲಿ ಜನರು ದೇವರ ಪೂಜಾ ಸಾಮಾನುಗಳಾದ ಹಾರ, ಕಾಯಿ, ಹಳೆಯ ದೇವರ ಫೋಟೋಗಳನ್ನು ಈ ಬಾವಿಯಲ್ಲಿ ಹಾಕುತ್ತಿದ್ದರು. ಇದರಿಂದಾಗಿ ಸದರಿ ಬಾವಿಯಲ್ಲಿ ಕಸ ಮತ್ತು ಗಲೀಜು ತುಂಬಿಕೊಂಡು ಕಲುಷಿತಗೊಂಡಿತ್ತು.

ಐತಿಹಾಸಿಕ ತೋಟದ ಬಾವಿ ಸ್ವಚ್ಛತಾ ಕಾರ್ಯಕ್ಕಾಗಿ ಪೊರಕೆ ಹಿಡಿದ ಎಸ್ಪಿ

ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಹೊತ್ತ ಎಸ್​.ಪಿ. ವೇದಮೂರ್ತಿ ಅವರು ಸ್ವತಃ ಪೊರಕೆ ಹಿಡಿದು ಬಾವಿ ಸ್ವಚ್ಛಗೊಳಿಸಿದರು. ನಗರದ ಗ್ರೀನ್ ರಾಯಚೂರು ಹಾಗೂ ಇನ್ನಿತರ ಸಂಘಗಳ ಜೊತೆಗೆ ಸೇರಿ ಸ್ವಚ್ಚತಾ ಆಂದೋಲನದಡಿ ತೋಟದಬಾವಿ ಸ್ವಚ್ಛತೆಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ನಗರಸಭೆ ಅಧಿಕಾರಿಗಳಾದ ಶರಣಪ್ಪ ಹಾಗೂ ಕೊಂಡ ಕೃಷ್ಣಮೂರ್ತಿ, ಪಾಟೀಲ್, ಸರಸ್ವತಿ, ರಾಜೇಂದ್ರ ಕುಮಾರ್, ಶಂಕ್ರಪ್ಪ ಯುವ ಬ್ರಿಗೇಡ್ ಪದಾಧಿಕಾರಿಗಳು ಭಾಗವಹಿಸಿದ್ದರು. ಅಲ್ಲದೆ ಇದೇ ವೇಳೆ ಗಿಡಗಳನ್ನು ನೆಡಲಾಯಿತು. ಹಾಗೂ ವೃಕ್ಷವನ್ನು ಅಪ್ಪಿಕೊಂಡು ವೃಕ್ಷ ರಕ್ಷಣೆಯ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಯಿತು.

ABOUT THE AUTHOR

...view details