ಕರ್ನಾಟಕ

karnataka

By

Published : Jul 13, 2020, 12:04 PM IST

ETV Bharat / state

ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ನೀರು: ಆತಂಕದಲ್ಲಿ ನಡುಗಡ್ಡೆ ಜನತೆ!

ಕೃಷ್ಣಾ ನದಿಗೆ ಬರುವ ನೀರು ಹಂತ ಹಂತವಾಗಿ ಹೆಚ್ಚುತ್ತಿದ್ದು, ರಾಯಚೂರು ಜಿಲ್ಲೆ ನಡುಗಡ್ಡೆ ಜನರಲ್ಲಿ ಆತಂಕ ಹೆಚ್ಚಿದೆ.

dam
dam

ಲಿಂಗಸುಗೂರು (ರಾಯಚೂರು):ನಾರಾಯಣಪುರ ಬಸವಸಾಗರ ಅಣೆಕಟ್ಟು ಕ್ರೆಸ್ಟ್ ಗೇಟ್ ಮೂಲಕ ಕೃಷ್ಣಾ ನದಿಗೆ ಬರುವ ನೀರು ಹಂತ ಹಂತವಾಗಿ ಹೆಚ್ಚುತ್ತಿದ್ದು, ರಾಯಚೂರು ಜಿಲ್ಲೆ ನಡುಗಡ್ಡೆ ಜನರಲ್ಲಿ ಆತಂಕ ಹೆಚ್ಚಿಸಿದೆ.

ಅಣೆಕಟ್ಟೆಯಿಂದ ಆರಂಭದಲ್ಲಿ 10 ಸಾವಿರ ಕ್ಯೂಸೆಕ್​ನಿಂದ ನೀರು ಹೆಚ್ಚಿಸುತ್ತ ಬಂದಿದ್ದು, ಸೋಮವಾರ ಬೆಳಗಿನ ಜಾವ 34,400 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಅಣೆಕಟ್ಟೆನಿಂದ ಕೃಷ್ಣಾ ನದಿಗೆ ನೀರು

ಅಣೆಕಟ್ಟು 492.252ಮೀಟರ್ ಎತ್ತರವಿದ್ದು, ಸದ್ಯ 491.629 ಮೀಟರ್​ನಷ್ಟು ನೀರು ಸಂಗ್ರಹಗೊಂಡಿದೆ. ಈ ಹಿನ್ನೆಲೆಯಲ್ಲಿ 5 ಕ್ರೆಸ್ಟ್ ಗೇಟ್ ಮೂಲಕ ನೀರು ಹೊರ ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಅಣೆಕಟ್ಟೆಗೆ 40 ಸಾವಿರ ಕ್ಯೂಸೆಕ್ ಒಳಹರಿವಿದೆ ಎಂದು ಅಣೆಕಟ್ಟೆ ಎಇಇ ಆರ್.ಎಲ್ ಹಳ್ಳೂರು ತಿಳಿಸಿದ್ದಾರೆ.

ಕೃಷ್ಣಾನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟಿದ್ದು, ಲಿಂಗಸುಗೂರು ತಾಲೂಕಿನ ಅರಲಗಡ್ಡಿ, ಕರಕಲಗಡ್ಡಿ ವಂಕಂನಗಡ್ಡಿ ಪ್ರದೇಶದ ಜನರಲ್ಲಿ ಆತಂಕದ ಕರಿಛಾಯೆ ಹೆಚ್ಚಿದೆ.

ಸರ್ಕಾರ ಮೂರೂವರೆ ದಶಕಗಳ ಅವಧಿಯಲ್ಲಿ ನೀಡಿರುವ ಯಾವುದೇ ಭರವಸೆಗಳು ಈಡೇರಿಲ್ಲ. ನಡುಗಡ್ಡೆ ಪ್ರದೇಶಗಳ ಜನರ ಶಾಶ್ವತ ಪರಿಹಾರದ ಮೊದಲ ಹಂತ ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಬೇರೆಡೆ ಜಮೀನುಗಳನ್ನು ನೀಡುವ ಚಿಂತನೆಗೆ ಮನ್ನಣೆಯೆ ದೊರೆತಿಲ್ಲ. ವರ್ಷಕ್ಕೊಮ್ಮೆ ಪ್ರವಾಹ ಬಂದಾಗ ಬಂದು ಹೋಗುವ ಅಧಿಕಾರಿಗಳು ಮರಳಿ ಇತ್ತ ಕಡೆ ಬರುವುದಿಲ್ಲ ಎಂಬುದು ಸಂತ್ರಸ್ತರ ಆರೋಪ.

ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮಾತನಾಡಿ, ನಡುಗಡ್ಡೆ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ತಾಂತ್ರಿಕ ತೊಂದರೆಗಳಿವೆ. ಆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಎತ್ತರದ ಪ್ರದೇಶಕ್ಕೆ ತೆರಳಲು, ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.

ABOUT THE AUTHOR

...view details