ರಾಯಚೂರು: ಪ್ರಜಾಪ್ರಭುತ್ವ ದೊಡ್ಡ ಹಬ್ಬ ಎಂದೇ ಬಣ್ಣಿಸಲಾಗಿರುವ ಲೋಕಸಭೆ ಮತದಾನ ಹಕ್ಕು ಹೊಂದಿರುವ ಪ್ರತಿಯೊಬ್ಬರು ಮತದಾನ ಮಾಡಬೇಕು ಎನ್ನುವ ದೃಷ್ಟಿಯಿಂದ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಮತದಾನ ಜಾಗೃತಿ ರಾಯಭಾರಿಯಾಗಿ ಪಂಡಿತ್ ನರಸಿಂಹಲು ವಡ್ಡವಟ್ಟಿ ಆಯ್ಕೆ
ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಅಂತಾರಾಷ್ಟ್ರೀಯ ಕ್ಲಾರಿಯೋನೆಟ್ ವಾದಕ ಡಾ. ಪಂಡಿತ್ ನರಸಿಂಹಲು ವಡ್ಡವಟ್ಟಿಯವರನ್ನು ಮತದಾನ ಜಾಗೃತಿ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.
ಕ್ಲಾರಿಯೋನೆಟ್ ವಾದಕ ಡಾ.ಪಂಡಿತ್ ನರಸಿಂಹಲು ವಡ್ಡವಟ್ಟಿ
ಇದೀಗ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಪ್ರಸಕ್ತ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಅಂತಾರಾಷ್ಟ್ರೀಯ ಕ್ಲಾರಿಯೋನೆಟ್ ವಾದಕ ಡಾ. ಪಂಡಿತ್ ನರಸಿಂಹಲು ವಡ್ಡವಟ್ಟಿಯನ್ನ ಮತದಾನ ಜಾಗೃತಿ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.
ತಮ್ಮನ್ನು ಚುನಾವಣೆ ರಾಯಭಾರಿಯಾಗಿ ಆಯ್ಕೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಡಾ. ಪಂಡಿತ್ ನರಸಿಂಹಲು ವಡ್ಡವಟ್ಟಿ, ಈಟಿವಿ ಭಾರತ್‌ನೊಂದಿಗೆ ಮಾತನಾಡಿ ವಿಷಯ ಹಂಚಿಕೊಂಡರು.