ಕರ್ನಾಟಕ

karnataka

ETV Bharat / state

ಪೂರ್ಣಗೊಳ್ಳದ ಶವಾಗಾರ ಕಾಮಗಾರಿ: ವಿಶೇಷಚೇತನನ ಮನವಿಗೆ ಸ್ಪಂದಿಸದ ಅಧಿಕಾರಿಗಳು - Raichuru

ಲಿಂಗಸುಗೂರಿನಲ್ಲಿ ಮೂರು ವರ್ಷಗಳ ಹಿಂದೆ ನಡೆಸಿದ್ದ ಶವಾಗಾರದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸ್ಮಶಾನದ ಪಕ್ಕದಲ್ಲಿರುವ ಮನೆಗಳಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ.

ಪೂರ್ಣಗೊಳ್ಳದ ಶವಗಾರ ಕಟ್ಟಡ ಕಾಮಗಾರಿ
ಪೂರ್ಣಗೊಳ್ಳದ ಶವಗಾರ ಕಟ್ಟಡ ಕಾಮಗಾರಿ

By

Published : Aug 24, 2020, 3:27 PM IST

ರಾಯಚೂರು: ಮೂರು ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶವಾಗಾರ ಸ್ಥಳಾಂತರ ವಿಚಾರ ಇನ್ನೂ ಬಗೆಹರಿದಿಲ್ಲ.

ಈ ಹಿಂದೆ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶವಾಗಾರ ನಿರ್ಮಾಣದ ಹೆಸರಲ್ಲಿ ಹಣ ದುರ್ಬಳೆಕೆ ನಡೆದಿತ್ತು. ನೀಲನಕ್ಷೆ ಆಧರಿಸಿ ನಿರ್ಮಾಣ ಆಗಬೇಕಿದ್ದ ಶವಾಗಾರ ಜಾತಿ, ಧರ್ಮ ವಿಚಾರದಲ್ಲಿ ತಕರಾರು ಮಾಡಿದಾಗ ಕಟ್ಟಡದ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಡಲಾಗಿತ್ತು. ಆದರೆ, ಸದ್ಯ ಇರುವ ಶವಾಗಾರ ವಿಶೇಷ ಚೇತನ ವ್ಯಕ್ತಿ ಅಮರೇಶ ವಿಶ್ವಕರ್ಮ ಎಂಬವರ ಮನೆ ಬಳಿ ಇದೆ. ನಿತ್ಯ ಹೆಣ ಸುಡುವುದು, ಸುಟ್ಟ ಶವದ ವಾಸನೆಯಿಂದ ಆ ಮನೆಯಲ್ಲಿ ವಾಸ ಮಾಡಲು ಕಷ್ಟಪಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಅಮರೇಶ ಅವರ ಬಾಡಿಗೆ ಮನೆಗಳಿಗೆ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ.

ಮೂರು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಆರೋಗ್ಯ ಇಲಾಖೆ ಆಸ್ಪತ್ರೆ ಮುಖ್ಯ ವೈದ್ಯರಿಗೆ ಸ್ಥಳಾಂತರ ಮಾಡಲು ಆದೇಶ ನೀಡಿದ್ದರೂ ಆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈಗಲಾದರೂ ಕ್ರಮ ಕೈಗೊಳ್ಳುವಂತೆ ವೃದ್ಧ ವಿಶೇಷ ಚೇತನ ಅಮರೇಶ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details