ರಾಯಚೂರು : ಕೃಷ್ಣಾ ನದಿಗೆ ಈಜಲು ಹೋಗಿದ್ದ ನಾಲ್ವರ ಪೈಕಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಲಿಂಗಸೂಗೂರು ತಾಲೂಕಿನ ಟಣಮನಕಲ್ ನ ಹತ್ತಿರ ಕೃಷ್ಣಾ ನದಿಯಲ್ಲಿ ನಡೆದಿದೆ. ಜಿಲ್ಲೆಯ ಹಟ್ಟಿ ಮೂಲದ ಸಂತೋಷ(24), ಶರಣಪ್ಪ(23) ಮೃತಪಟ್ಟವರು ಎಂದು ಹೇಳಲಾಗುತ್ತಿದೆ. ಶರಣಪ್ಪನ ಮೃತದೇಹ ಪತ್ತೆಯಾಗಿದ್ದು, ಸಂತೋಷ ಮೃತದೇಹಕ್ಕೆ ಶೋಧ ಕಾರ್ಯ ನಡೆದಿದೆ.
ರಾಯಚೂರು : ಸ್ನೇಹಿತರೊಂದಿಗೆ ಕೃಷ್ಣಾ ನದಿಗೆ ಈಜಲು ಹೋದ ಇಬ್ಬರು ನೀರುಪಾಲು
ನಿನ್ನೆ ನಾಲ್ವರು ಸ್ನೇಹಿತರು ಬೇಸಿಗೆ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಈಜಲು ತೆರಳಿದ್ದರು, ಈ ವೇಳೆ ಇಬ್ಬರು ಯುವಕರು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ಟಣಮನಕಲ್ ಹತ್ತಿರ ಕೃಷ್ಣಾ ನದಿಯಲ್ಲಿ ನಡೆದಿದೆ.
ಕೃಷ್ಣಾ ನದಿಗೆ ಈಜಲು ಹೋದ ಇಬ್ಬರು ನೀರುಪಾಲು
ಮೃತಪಟ್ಟ ಇಬ್ಬರಲ್ಲಿ ಸಂತೋಷ ಹಟ್ಟಿ ಚಿನ್ನದ ಗಣಿ ನೌಕರನಾಗಿದ್ದು, ಶರಣಪ್ಪ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಶನಿವಾರ ನಾಲ್ವರು ಸ್ನೇಹಿತರು ಸೇರಿಕೊಂಡು ಬೇಸಿಗೆ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಈಜಲು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ನೀರಿಗಿಳಿದ ಸಂತೋಷ, ಶರಣಪ್ಪ ನೀರಿನ ರಭಸಕ್ಕೆ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.