ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರು ಕೂಡಲೇ ಕೆಲಸಕ್ಕೆ ಹಾಜರಾಗಬೇಕು: ಸಿಎಂ ಬಿಎಸ್​ವೈ

ಮುಷ್ಕರನಿರತ ಸಾರಿಗೆ ನೌಕರರು ಕೂಡಲೇ ಕೆಲಸಕ್ಕೆ ಹಾಜರಾಗಬೇಕು. ಗೈರಾದವರಿಗೆ ಸಂಬಳ ನೀಡಲ್ಲ. ಯಾರ ಜತೆಗೆ ಚರ್ಚೆಗಾಗಲಿ, ಮಾತುಕತೆಯಾಗಲಿ ನಡೆಸುವುದಿಲ್ಲ ಎಂದು ಸಿಎಂ ಬಿಎಸ್​ವೈ ಸ್ಪಷ್ಟಪಡಿಸಿದ್ದಾರೆ.

CM B. S. Yediyurappa
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Apr 11, 2021, 2:49 PM IST

ರಾಯಚೂರು:ಸಾರಿಗೆ ಮುಷ್ಕರನಿರತರು ಕೂಡಲೇ ಕೆಲಸಕ್ಕೆ ಹಾಜರಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮುದಗಲ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರು ಕೆಲಸಕ್ಕೆ ಗೈರಾದವರಿಗೆ ಸಂಬಳ ನೀಡಲ್ಲ. ಯಾರ ಜತೆಗೆ ಚರ್ಚೆಗಾಗಲಿ, ಮಾತುಕತೆಯಾಗಲಿ ನಡೆಸುವುದಿಲ್ಲ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಕಳೆದ ಒಂದು ವಾರದಲ್ಲಿ ಮಸ್ಕಿ ಕ್ಷೇತ್ರದಲ್ಲಿಯೂ ಬದಲಾಗಿದೆ. ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಗೆಲುವು ಸಾಧಿಸಿದ್ರೆ, ಕಾಂಗ್ರೆಸ್ ನೆಲಸಮ ನಿಶ್ಚಿತವಾಗಿದ್ದು ಮೂರು ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ. ಇಂದು ಬೆಳಿಗ್ಗೆಯಿಂದ ಸಂಜೆವರೆಗೂ ವಿವಿಧ ಸಮುದಾಯಗಳ ಮುಖಂಡರ ಜೊತೆ ಚರ್ಚೆ ಮಾಡುತ್ತಿದ್ದೇನೆ. ಎಲ್ಲಾ ಸಮುದಾಯದವರ ಮನವೊಲಿಸಿ ಮತ ಹಾಕಿಸಲು ಮನವಿ ಮಾಡಿದ್ದೇನೆ ಎಂದರು.

ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು ಹಗುರವಾಗಿ ಹೇಳಿಕೆ ನೀಡಬಾರದು. ಸಿದ್ದರಾಮಯ್ಯ,ಡಿಕೆಶಿ ಹೇಳಿಕೆಗೆ ಜನ ಉತ್ತರ ನೀಡುತ್ತಾರೆ. ಫಲಿತಾಂಶ ಬಳಿಕ ಎಲ್ಲವೂ ತಿಳಿಯುತ್ತದೆ ಎಂದರು.

ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಜನ ಅಂತರ ಕಾಯ್ದುಕೊಂಡು ಹರಡದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಬಿಎಸ್​ವೈ ಹೇಳಿದರು.

ಇದನ್ನೂ ಓದಿ:ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಆರೋಪ: ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ

ABOUT THE AUTHOR

...view details