ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮುದಗಲ್ಲ ಪಟ್ಟಣದ ವೆಂಕಟರಾಯ ಪೇಟೆಯಲ್ಲಿ ನಿನ್ನೆ ಸಂಜೆ ನಡೆದಿದೆ.
ಕುಡಿಯುವ ನೀರಿಗಾಗಿ ನಡೆದ ಜಗಳ ಮಹಿಳೆ ಕೊಲೆಯಲ್ಲಿ ಅಂತ್ಯ - The murder of a woman for drinking water issue
ವೆಂಕಟರಾಯ ಪೇಟೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎರಡು ಕುಟುಂಬಸ್ಥರ ಮಧ್ಯೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿ ಚಾಕುವಿನಿಂದ ಇರಿದು ಮಹಿಳೆಯನ್ನು ಕೊಲೆ ಮಾಡಲಾಗಿದೆ..
ಮಹಿಳೆ ಕೊಲೆ
ನೇತ್ರಾವತಿ (36) ಎಂಬುವರು ಕೊಲೆಯಾದ ಮಹಿಳೆ. ಮನೆ ಬಳಿಯಿದ್ದ ನಳದಲ್ಲಿ ಕುಡಿಯುವ ನೀರು ತುಂಬುವಾಗ ಕ್ಷುಲ್ಲಕ ವಿಷಯಕ್ಕೆ ಎರಡು ಕುಟುಂಬಸ್ಥರ ಮಧ್ಯೆ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿ ಚಾಕೂವಿನಿಂದ ಇರಿದು ಮಹಿಳೆಯನ್ನು ಕೊಲೆ ಮಾಡಲಾಗಿದೆ.
ಮೃತಳ ಗಂಡನ ಸಹೋದರನ ಮಗ ಶಿವರಾಜ (25) ಎಂಬಾತ ಕೊಲೆ ಮಾಡಿದ ಆರೋಪಿ. ಈ ಕುರಿತು ಮುದಗಲ್ಲ ಪಿಎಸ್ಐ ಡಾಕೇಶ್ ಉಪ್ಪಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.