ಕರ್ನಾಟಕ

karnataka

ETV Bharat / state

ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ಸಾಧ್ಯತೆ: ಪ್ರಬಲ ಅಭ್ಯರ್ಥಿಗಾಗಿ 'ಕೈ' ಹುಡುಕಾಟ - ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರ

ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಶಾಸಕರನ್ನ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಲಾಗಿದೆ. ಪಕ್ಷದ ನಡೆ ಪ್ರಶ್ನಿಸಿ ಶಾಸಕರು ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ಇತ್ಯರ್ಥದ ಬಳಿಕ ರಾಜ್ಯದಲ್ಲಿ ಮತ್ತೆ ಉಪಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಮಸ್ಕಿ ಕ್ಷೇತ್ರದ ಬೈ ಎಲೆಕ್ಷನ್​ಗೆ ಕೈ ಪಡೆ ಸನ್ನದ್ದವಾಗುತ್ತಿದೆ.

ನಾಯಕನ ಹುಡುಕಾಟದಲ್ಲಿ ಕಾಂಗ್ರೆಸ್​​​

By

Published : Sep 6, 2019, 9:41 AM IST

ರಾಯಚೂರು: ರಾಜ್ಯದಲ್ಲಿ ನಡೆದ 'ಆಪರೇಷನ್ ಕಮಲ'ದ ನಂತರ ಇಲ್ಲಿನ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್, ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಭರ್ಜರಿ ತಯಾರಿ ನಡೆಸುತ್ತಿದ್ದು, ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕಾರ್ಯತಂತ್ರ ರೂಪಿಸುತ್ತಿದೆ.

ಪ್ರಬಲ ನಾಯಕನ ಹುಡುಕಾಟದಲ್ಲಿ ಕಾಂಗ್ರೆಸ್​​​

ಪರಿಶಿಷ್ಟ ಪಂಗಡ (ಎಸ್ ಟಿ) ಮೀಸಲು ಕ್ಷೇತ್ರದಲ್ಲಿ ಕಳೆದ ಎರಡು ಅವಧಿಗೆ ಕಾಂಗ್ರೆಸ್​​ ಅಭ್ಯರ್ಥಿಯಾಗಿದ್ದ ಪ್ರತಾಪ್ ಗೌಡ ಪಾಟೀಲ್ ಎರಡು ಬಾರಿ ಗೆಲುವು ಸಾಧಿಸಿದ್ರು. ಆದ್ರೆ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಅವರು ತಿರುಗಿ ಬಿದ್ದಿದ್ದರು. ಆಗ ಕಾಂಗ್ರೆಸ್​​ನ ಪ್ರತಾಪ್ ಗೌಡ ಪಾಟೀಲ್​​​ರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದು, ಇದನ್ನು ಪ್ರಶ್ನಿಸಿ ಪ್ರತಾಪ್ ಗೌಡ ಪಾಟೀಲ್ ನ್ಯಾಯಲಯದ ಮೋರೆ ಹೋಗಿದ್ದಾರೆ. ಆದ್ರೆ ಇತ್ತ ಮಸ್ಕಿಯಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಮಾಜಿ ಸಂಸದ ಬಿ.ವಿ. ನಾಯಕರನ್ನ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆದರೆ, ಎರಡು ಪಕ್ಷಗಳು ಪ್ರತಿಷ್ಠೆ ಪಣವಾಗಿಟ್ಟು ಚುನಾವಣೆ ಎದುರಿಸುವ ದೃಷ್ಠಿಯಿಂದ ಕೈ ಪಡೆ ಈಗಾಗಲೇ ಜಿಲ್ಲೆಯ ಶಾಸಕರು, ಪ್ರಮುಖ ಮುಖಂಡರೊಳಗೊಂಡ ಸಭೆಯನ್ನು ಮಸ್ಕಿಯಲ್ಲಿ ನಡೆಸಿದೆ.

ABOUT THE AUTHOR

...view details