ಕರ್ನಾಟಕ

karnataka

ETV Bharat / state

ಪ್ರವಾಹ ಸಂತ್ರಸ್ಥರಿಗೆ ಅನುದಾನ ನೀಡುವಲ್ಲಿ ವಿಫಲ: ರಾಜ್ಯ ಸರಕಾರದ ವಿರುದ್ದ ಬೋಸರಾಜ್ ವಾಗ್ದಾಳಿ! - relief found

ಕೃಷ್ಣ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದು ನೆರೆಹಾವಳಿ ಅಪ್ಪಳಿಸಿದೆ. ಇದರಿಂದ ಜನರ ಪ್ರವಾಹಕ್ಕೆ ತತ್ತರಿಸಿದ್ದಾರೆ. ಆಯಾ ಇಲಾಖೆಯ ಸಚಿವರ ಇಲ್ಲದ ಕಾರಣ ಪ್ರವಾಹವನ್ನು ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜ್ ಆರೋಪಿಸಿದ್ದಾರೆ.

ಎನ್.ಎಸ್.ಬೋಸರಾಜ್, ವಿಧಾನಪರಿಷತ್ ಸದಸ್ಯ

By

Published : Aug 13, 2019, 6:42 PM IST

ರಾಯಚೂರು:ಕೃಷ್ಣ ನದಿಯ ಪ್ರವಾಹದಿಂದ ರಾಜ್ಯದಲ್ಲಿ ಎದುರಾಗಿರುವ ನೆರೆ ಹಾವಳಿಯನ್ನ ನಿಭಾಯಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜ್ ಆರೋಪಿಸಿದ್ದಾರೆ.

ರಾಯಚೂರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದು ನೆರೆಹಾವಳಿ ಅಪ್ಪಳಿಸಿದೆ. ಇದರಿಂದ ಜನರ ಪ್ರವಾಹಕ್ಕೆ ತತ್ತರಿಸಿದ್ದಾರೆ. ಆಯಾ ಇಲಾಖೆಯ ಸಚಿವರ ಇಲ್ಲದ ಕಾರಣ ಪ್ರವಾಹವನ್ನು ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ. ಕೇಂದ್ರ ಸರಕಾರವು ಪ್ರವಾಹ ಉಂಟಾಗಿರುವ ಪ್ರದೇಶಗಳಲ್ಲಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ರು.

ಇನ್ನು ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟದ ಬಗ್ಗೆ ಸಿಎಂ ದಿನಕ್ಕೊಂದು ಅಂಕಿ ಅಂಶಗಳನ್ನು ಹೇಳುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿಯೇ ಬೆಳೆ ಹಾನಿಯನ್ನು ಹೊರತುಪಡಿಸಿ ಸುಮಾರು 400 ಕೋಟಿ ರೂ. ನಷ್ಟವಾಗಿದ್ದರೂ ಸರಕಾರ ಪ್ರವಾಹ ಪೀಡಿತ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡುವಾಗ ರಾಯಚೂರು ಜಿಲ್ಲೆಯನ್ನು ಕೈಬಿಟ್ಟು ತಾರತಮ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ರಾಜ್ಯ ಸರಕಾರದ ವಿರುದ್ದ ಬೋಸರಾಜ್ ವಾಗ್ದಾಳಿ

ಸಂತ್ರಸ್ತರಿಗೆ ಇರುವ ಕೇಂದ್ರಗಳಲ್ಲಿ ಸರಕಾರದಿಂದ ಕೇವಲ ಊಟದ ವ್ಯವಸ್ಥೆ ಮಾತ್ರ ಮಾಡಲಾಗಿದ್ದು, ಪರಿಹಾರ ಸಾಮಗ್ರಿಗಳನ್ನು ನೀಡಲಾಗುತ್ತಿಲ್ಲ. ಸಂಘ ಸಂಸ್ಥೆಗಳು ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿವೆ. ಪರಿಹಾರ ಕಾಮಗಾರಿಗಳ ಮೇಲ್ವಿಚಾರಣೆ ಮಾಡುವವರು ಇಲ್ಲದಂತೆ ಆಗಿದೆ. ಪ್ರವಾಹ ಸ್ಥಿತಿ ಅಲ್ಪ ಮಟ್ಟಿಗೆ ಇಳಿಕೆಯಾಗುತ್ತಿದ್ದು, ಸಂತ್ರಸ್ತರಿಗೆ ಸುಮಾರು 15 ದಿನಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯಗಳನ್ನು ವಿತರಿಸುವುದರ ಜತೆಗೆ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಿ.ಎಸ್.ಹೂಲಗೇರಿ, ಬಸನಗೌಡ ದದ್ದಲ್, ಬಸವರಾಜ ಪಾಟೀಲ್ ಇಟಗಿ, ಮಾಜಿ ಸಂಸದ ಬಿ.ವಿ.ನಾಯಕ, ಮುಖಂಡರಾದ ರುದ್ರಪ್ಪ ಅಂಗಡಿ, ರಾಮಣ್ಣ ಇರಬಗೇರಾ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details