ರಾಯಚೂರು:ನಗರದ ಪೊಲೀಸ್ ಕಾಲೊನಿಯ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳ ಗುರುತು ಪತ್ತೆ ಮಾಡುವಲ್ಲಿ ಗೊಂದಲ ಉಂಟಾಗಿರುವ ಘಟನೆ ನಡೆದಿದೆ.
ಮರುಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು, ಸಿಬ್ಬಂದಿಯಲ್ಲಿ ಗೊಂದಲ - ಎಸ್ಸೆಸ್ಸೆಲ್ಸಿ ಪರೀಕ್ಷೆ 2020
ಮರುಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಶಾಲಾ ದಿನಗಳ ಭಾವಚಿತ್ರ ಕೊಟ್ಟ ಪರಿಣಾಮ, ಗುರುತು ಪತ್ತೆ ಹಚ್ಚುವಲ್ಲಿ ಸಿಬ್ಬಂದಿಗೆ ಗೊಂದಲ ಉಂಟಾಯಿತು.
ಸಿಬ್ಬಂದಿಗೆ ಗೊಂದಲ
ಮರುಪರೀಕ್ಷೆ (ರಿಪೀಟರ್ಸ್) ಬರೆಯಲು ಬಂದವರು ಮಾತ್ರ ಈ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದು, ಹಾಲ್ ಟಿಕೆಟ್ಗೆ ಶಾಲಾ ದಿನಗಳಲ್ಲಿನ ಭಾವಚಿತ್ರ ಕೊಟ್ಟಿದ್ದರಿಂದ ಸಿಬ್ಬಂದಿಯಲ್ಲಿ ಗೊಂದಲ ಉಂಟಾಯಿತು.
ಅನುಮಾನಗೊಂಡು ಪರೀಕ್ಷಾರ್ಥಿಗಳನ್ನು ವಾಪಸ್ ಕಳುಹಿಸಲು ಸಿಬ್ಬಂದಿ ಮುಂದಾಗಿದ್ದರು. ನಂತರ, ಇತರ ದಾಖಲೆಗಳನ್ನ ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು.