ಕರ್ನಾಟಕ

karnataka

ETV Bharat / state

ನರೇಗಾ ಯೋಜನೆಯಡಿ ಸಂಬಳ ವಿಳಂಬ, ವಂಚನೆ ಆರೋಪ: ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ

ಮಾಡಿದ ಕೆಲಸಕ್ಕೆ ಗ್ರಾಮಪಂಚಾಯಿತಿ ಅಧ್ಯಕ್ಷೆಯಿಂದ ಸಂಬಳ ಕೇಳಲು ಹೋದ ಕಾರ್ಮಿಕನ ಮೇಲೆ ಹಲ್ಲೆ ಮಾಡಿಸಿರುವುದಲ್ಲದೇ ಸುಳ್ಳು ಪ್ರಕರಣ ದಾಖಲು ಮಾಡಿಸಿರುವ ಘಟನೆ ರಾಯಚೂರು ಜಿಲ್ಲೆಯ ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ನಡೆದಿದೆ.

ನರೇಗಾ ಯೋಜನೆ: ಯುವಕನ ಮೇಲೆ ಹಲ್ಲೆ

By

Published : Mar 20, 2019, 11:26 AM IST

ರಾಯಚೂರು: ನರೇಗಾ ಯೋಜನೆಯಡಿ ಕೆಲಸ ಮಾಡಿದ ಹಣ ನೀಡಲು ವಿಳಂಬ ಮಾಡಿದ್ದನ್ನು ಪ್ರಶ್ನಿಸಿ ಗ್ರಾಮ ಪಂಚಾಯತಿಗೆ ನ್ಯಾಯ ಕೇಳಲು ಹೋದ ಯುವಕನ ಮೇಲೆ ಹಲ್ಲೆ ಮಾಡಿಸಿದ್ದಲ್ಲದೇ, ಅಧ್ಯಕ್ಷೆ ತಾಯಮ್ಮ ನಾಯಕ, ಆತನ ಮೇಲೆ ಅಟ್ರಾಸಿಟಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಯುವಕನ ತಾಯಿ ಆರೋಪಿಸಿದ್ದಾಳೆ.

ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ವೇತನ ನೀಡಿಲ್ಲ ಎಂದು ಕೂಲಿ ಕಾರ್ಮಿಕ ರಾಮ್ ಸುಧೀರ್ ಗ್ರಾಮ ಪಂಚಾಯತಿಗೆ ದೂರು ನೀಡಿದ್ದ. ಜೊತೆಗೆ ವಿಳಂಬದ ಬಗ್ಗೆ ಪ್ರಶ್ನೆ ಮಾಡಿದ್ದ. ಇದನ್ನು ಸಹಿಸದೇ ಸುದೀರ್ ಮೇಲೆ ಹಲ್ಲೆ ಮಾಡಿಸಿದ್ದು, ಜೊತೆಗೆ ಆತನ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಸುಧೀರ್ ಅವರ ತಾಯಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಡುತ್ತಾ ವಿವರಿಸಿದರು.

ನರೇಗಾ ಯೋಜನೆ: ಯುವಕನ ಮೇಲೆ ಹಲ್ಲೆ


ಹಿರೇದಿನ್ನಿ ಗ್ರಾಮ ಪಂಚಾಯತಿಯಲ್ಲಿ ಗಾಳಿ ದುರ್ಗಮ್ಮ ಕ್ಯಾಂಪ್​ನಲ್ಲಿ 2016-17 ನೇ ಸಾಲಿನಲ್ಲಿ ಬಯಲು ಶೌಚ ಮುಕ್ತ ಗ್ರಾಮ (ಒಡಿಎಫ್ ) ಎಂಬ ಯೋಜನೆಯು ಈ ಕ್ಯಾಂಪ್​ಗೆ ಮಂಜೂರಾಗಿದ್ದು, ಸಿಸಿ ರಸ್ತೆ, ಚರಂಡಿ, ಸಿಡಿ ನಿರ್ಮಾಣ ಸೇರಿ ಇತರೆ ಅನೇಕ ಕಾಮಗಾರಿಗಳಾದ ಗುತ್ತಿಗೆ ನಿರ್ವಹಿಸಿದ ಅಧ್ಯಕ್ಷೆ ಅನೇಕ ಅವ್ಯವಹಾರ ನಡೆಸಿದ್ದಾರೆ. ಅಷ್ಟೇಅಲ್ಲದೇ ಅವರು ತಮಗೆ ಬೇಕಾದವರಿಗೆ ಕಾಮಗಾರಿ ನೀಡಿದ್ದಾರೆ. ಅಧಿಕಾರ ಬಳಸಿ, ಅಲ್ಲದೇ ನಕಲಿ ಜಾಬ್ ಕಾರ್ಡ್ ನೀಡಿ ನರೇಗಾ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.


ಇನ್ನೂ ನರೇಗಾ ಯೋಜನೆಯಡಿ ಅದ ಅವ್ಯವಹಾರದ ಬಗ್ಗೆ ರಾಮ್ ಸುಧೀರ್ ಖಾಸಗಿ ವಾಹಿನಿಗೆ ಮಾಹಿತಿ ನೀಡಿ ಪ್ರತಿಕ್ರಿಯಿಸಿದ್ದ ಎಂದು ತಿಳಿದ ಮೇಲೆ ಅಧ್ಯಕ್ಷೆ ತಾಯಮ್ಮ ತಮ್ಮ ಅಧಿಕಾರ ಬಳಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಯುವಕನ ತಾಯಿ ಆರೋಪಿಸಿದ್ದಾರೆ. ಜೊತೆಗೆ ತಮ್ಮ ಮಗನ ಮೇಲಿನ ಕೇಸ್ ವಾಪಸ್ ಪಡೆದು ನಮಗೆ ನ್ಯಾಯ ದೊರೆಕಿಸಬೇಕೆಂದು ಅಲವತ್ತುಕೊಂಡಿದ್ದಾರೆ.


ABOUT THE AUTHOR

...view details