ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ 'ಸದಾನಂದ ಗೌಡ ಗೋಬ್ಯಾಕ್‌' ಆಕ್ರೋಶ

ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಿಲ್ಲ ಎಂದು ಆರೋಪಿಸಿ ರಾಯಚೂರಿನಲ್ಲಿ ಕೇಂದ್ರ ಸಚಿವ ಸದಾನಂದ ಗೌಡರಿಗೆ ಕಾಂಗ್ರೆಸ್ ಕಾರ್ಯಕರ್ತರು ಗೋಬ್ಯಾಕ್‌ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ರಾಯಚೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸದಾನಂದಗೌಡ ಗೋ ಬ್ಯಾಕ್ ಪ್ರತಿಭಟನೆ

By

Published : Oct 5, 2019, 4:11 PM IST

Updated : Oct 5, 2019, 5:39 PM IST

ರಾಯಚೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರ ನೀಡಲು ವಿಳಂಬಿಸುತ್ತಿದೆ ಎಂದು ಆರೋಪಿಸಿ ರಾಯಚೂರಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ಸದಾನಂದ ಗೌಡ ಗೋ ಬ್ಯಾಕ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ರಾಯಚೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸದಾನಂದಗೌಡ ಗೋ ಬ್ಯಾಕ್ ಪ್ರತಿಭಟನೆ

ನಗರದ ಹೊರವಲಯದ ಕೃಷಿ ವಿವಿಯ ಮುಖ್ಯದ್ವಾರದ ಬಳಿ ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸಚಿವ ಸದಾನಂದ ಗೌಡರು ರಾಯಚೂರಿನಲ್ಲಿ ಕೇಂದ್ರ ನೀತಿ ಆಯೋಗದ ಕಾರ್ಯಾಗಾರದಲ್ಲಿ ಭಾಗವಹಿಸುವ ಕಾರ್ಯಕ್ರಮವಿತ್ತು. ಈ ವೇಳೆ ಕೇಂದ್ರ ವಿಳಂಬ ಧೋರಣೆ ಖಂಡಿಸಿ ಸಚಿವರಿಗೆ ಘೇರಾವ್ ಹಾಕಲು ಕೈ ಕಾರ್ಯಕರ್ತರು ಮುಂದಾಗಿದ್ದಾರೆ.

ಆದ್ರೆ, ಸಚಿವರು ಬರುವ ಮುನ್ನವೇ ಪೊಲೀಸರು ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯಿಂದಾಗಿ ನಗರದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

Last Updated : Oct 5, 2019, 5:39 PM IST

ABOUT THE AUTHOR

...view details