ಕರ್ನಾಟಕ

karnataka

ETV Bharat / state

ಆರ್​ಟಿಪಿಎಸ್​​ನ 4 ಘಟಕಗಳಲ್ಲಿ ವಿದ್ಯುತ್​ ಉತ್ಪಾದನೆ ಸ್ಥಗಿತ - RTPS

ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆ ಆರ್​ಟಿಪಿಎಸ್ (Raichur Thermal Power Station)  ವಿದ್ಯುತ್ ಘಟಕಕ್ಕೆ ಬೇಡಿಕೆ ಕಡಿಮೆಯಾಗಿದೆ.

ವಿದ್ಯುತ್ ಉತ್ಪಾದನೆ ಇಳಿಕೆ ಮಾಡಿದ ಆರ್​ಟಿಪಿಎಸ್

By

Published : Aug 20, 2019, 9:42 AM IST

ರಾಯಚೂರು:ರಾಜ್ಯದಲ್ಲಿ ಉಂಟಾದ ಮಹಾಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಮಾಡಲಾಗಿದೆ.

ವಿದ್ಯುತ್ ಉತ್ಪಾದನೆ ಇಳಿಕೆ ಮಾಡಿದ ಆರ್​ಟಿಪಿಎಸ್

ಜಲಾಶಯಗಳಲ್ಲಿ ನೀರು ಲಭ್ಯವಿರುವುದರಿಂದ ಜಲ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಹೀಗಾಗಿ ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಘಟಕಕ್ಕೆ ಬೇಡಿಕೆ ಕಡಿಮೆಯಾಗಿದೆ. 8 ಘಟಕಗಳ ಪೈಕಿ 4 ಸ್ಥಗಿತಗೊಳಿಸಿ, ನಾಲ್ಕು ವಿದ್ಯುತ್ ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಒಟ್ಟು 8 ಘಟಕಗಳಿಂದ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿರುವ ಆರ್​ಟಿಪಿಎಸ್​ನ 2, 4, 7, 8ನೇ ಘಟಕಗಳಿಂದ 754 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

1, 3, 5, 6ನೇ ಘಟಕಗಳಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸುವ ಮೂಲಕ ನಾಲ್ಕು ಘಟಕಗಳಿಗೆ ವಿಶ್ರಾಂತಿ ನೀಡಲಾಗಿದೆ.

ABOUT THE AUTHOR

...view details