ಕರ್ನಾಟಕ

karnataka

ETV Bharat / state

ರಾಯಚೂರು: ಐದು ವರ್ಷಗಳ ನಂತರ ಕೊಲೆ ಪ್ರಕರಣದ ಆರೋಪಿ ಅಂದರ್​! - raichur latest news

2016ರಲ್ಲಿ ನಜ್ಮಾ ಎಂಬುವವಳನ್ನು ಕೊಲೆ ಮಾಡಿದ್ದ ಪತಿ ಬಾಬುಸಾಬ್ ಕೋಠ ಪೊಲೀಸರ ಕೈಗೆ ಸಿಗದಂತೆ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದನು. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

raichur police arrested the accused of lady murder case
ನಜ್ಮಾ ಕೊಲೆ ಪ್ರಕರಣದ ಆರೋಪಿ ಅಂದರ್

By

Published : Jul 23, 2021, 7:39 AM IST

ರಾಯಚೂರು: ಪೊಲೀಸರು ಹರಸಾಹಸ ಪಟ್ಟು ಐದು ವರ್ಷಗಳ ನಂತರ ಕೊಲೆ ಪ್ರಕರಣವೊಂದರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣ ಗ್ರಾಮದಲ್ಲಿ 2016ರಲ್ಲಿ ನಜ್ಮಾ ಎಂಬಾಕೆಯನ್ನು ಕೊಲೆ ಮಾಡಿದ್ದ ಪತಿ ಬಾಬುಸಾಬ್​ ಕೋಠ ಪೊಲೀಸರ ಕೈಗೆ ಸಿಗದಂತೆ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದನು. ಡಿವೈಎಸ್ಪಿ ಎಸ್​.ಎಸ್ ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ, ಪೊಲೀಸ್ ಕಾನ್ಸ್​ಟೇಬಲ್​​ ಈರಣ್ಣ, ಬಸಯ್ಯ ಹಿರೇಮಠ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಉಡುಪಿ ಉದ್ಯಮಿ ಅಪಹರಿಸಿ ದರೋಡೆ ಪ್ರಕರಣ: ಮೂವರನ್ನು ಬಂಧಿಸಿದ ಪೊಲೀಸರು​​

ಆರೋಪಿ ಬಾಬುಸಾಬ್​​ ಕೋಠ ನನ್ನು ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details