ಕರ್ನಾಟಕ

karnataka

ETV Bharat / state

ರಾಯಚೂರು: ಐಟಿಐಗೆ ಆನ್​ಲೈನ್​ ಪರೀಕ್ಷೆ ಕೈ ಬಿಡುವಂತೆ ಪ್ರತಿಭಟನೆ

ಐಟಿಐ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆನ್​ಲೈನ್​ ಪರೀಕ್ಷಾ ಪದ್ಧತಿಯನ್ನು ಕೈಬಿಡುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

protest
ಪ್ರತಿಭಟನೆ

By

Published : Jan 2, 2020, 9:41 PM IST

ರಾಯಚೂರು: ಐಟಿಐ ತರಬೇತಿದಾರರಿಗೆ ಜಾರಿಗೊಳಿಸಿರುವ ಆನ್​ಲೈನ್​ ಪರೀಕ್ಷಾ ಪದ್ಧತಿ ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳ ಕೈಬಿಡುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಆನ್​ಲೈನ್​ ಪರೀಕ್ಷೆ ಕೈ ಬಿಡುವಂತೆ ಪ್ರತಿಭಟನೆ

ನಗರದ ಕರ್ನಾಟಕ ಸಂಘದಿಂದ ವಿವಿಧ ರಸ್ತೆಗಳ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಆನ್​ಲೈನ್ ಪರೀಕ್ಷೆ ಪದ್ಧತಿಯು ಲಕ್ಷಾಂತರ ಜನ ಐಟಿಐ ತರಬೇತುದಾರರನ್ನು ಗೊಂದಲಕ್ಕೆ ತಳ್ಳಿದೆ ಐಟಿಐ ತರಬೇತಿಯು ಕುಶಲತೆ ಕಾರ್ಯ ಕಲಿಕೆಗೆ ಹೆಚ್ಚು ಒತ್ತು ನೀಡುವ ತರಬೇತಿಯಾಗಿದೆ. ಇಲ್ಲಿ‌ ಥಿಯರಿಗಿಂತ ಪ್ರಾಕ್ಟಿಕಲ್​ಗೆ ಹೆಚ್ಚು ಪ್ರಾಮುಖ್ಯತೆ ಇರುವುದು ಇಲ್ಲಿ ‌ಕೌಶಲ್ಯ ಬೇಕೆ ವಿನಃ ಕಂಪ್ಯೂಟರ್ ಜ್ಞಾನವಲ್ಲ ಅಲ್ಲದೇ ಹಳ್ಳಿಯ ವಿದ್ಯಾರ್ಥಿಗಳು ಕಂಪ್ಯೂಟರ್ ತರಬೇತಿ ಪಡೆದಿರುವುದಿಲ್ಲ ಇಂತಹ ಸಂದರ್ಭದಲ್ಲಿ ಆನ್​ಲೈನ್ ಪರೀಕ್ಷೆ ಪದ್ದತಿ ಸರಿಯಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.

ಅಲ್ಲದೇ ಹಲವಾರು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಕಾಲೇಜುಗಳಲ್ಲಿ ಆನ್​ಲೈನ್ ಪರೀಕ್ಷೆಗಳಿಗೆ ತಯಾರಿಯೂ ಮಾಡಿಕೊಂಡಿಲ್ಲ ಇಲ್ಲಿ‌ ಕೌಶಲ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕೆ ವಿನಃ ಆನ್​ಲೈನ್ ಪರೀಕ್ಷೆಯ ಆಧಾರದಲ್ಲಿ ಅಲ್ಲ ಎಂದು ಒತ್ತಾಯಿಸಿದರು.

ABOUT THE AUTHOR

...view details