ರಾಯಚೂರು:ರಾಜ್ಯದ ಕಂದಾಯ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಆರ್.ಅಶೋಕ್ ವರ್ಷದ ಬಳಿಕ ಇಂದು (ಸೆ. 16, 2020) ರಾಯಚೂರು ಜಿಲ್ಲೆಯ ಪ್ರವಾಸ ಹಮ್ಮಿಕೊಂಡಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಇಂದು ರಾಯಚೂರಿಗೆ - ಆರ್ ಅಶೋಕ್ ಲೆಟೆಸ್ಟ್ ನ್ಯೂಸ್
ಕಂದಾಯ ಸಚಿವ ಆರ್.ಅಶೋಕ್ ಇಂದು ರಾಯಚೂರಿಗೆ ಪ್ರವಾಸ ಕೈಗೊಂಡಿದ್ದಾರೆ. ಮಧ್ಯಾಹ್ನ 3:30ರಿಂದ 5 ಗಂಟೆಯವರೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ, ಬಳಿಕ ಹೊಸಪೇಟೆಗೆ ತೆರಳಲಿದ್ದಾರೆ.
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ವರ್ಷ ಪೂರೈಸಿದೆ. ಸರ್ಕಾರದ ಆಯಾ ಇಲಾಖೆಯ ಸಚಿವರು ರಾಜ್ಯದಲ್ಲಿ ಪ್ರವಾಸ ಕೈಗೊಂಡು ತಮ್ಮ ಇಲಾಖೆಯ ಕಾರ್ಯವೈಖರಿಯನ್ನು ಪರಿಶೀಲಿಸುವುದರಿಂದ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುವುದಕ್ಕೆ ಮತ್ತು ಇಲಾಖೆಯ ವಾಸ್ತವ ಸ್ಥಿತಿ ಅರಿಯಲು ಅನುಕೂಲವಾಗುತ್ತದೆ.
ಅದರಂತೆ ಇಂದು ಮಧ್ಯಾಹ್ನ ಯಾದಗಿರಿಯಿಂದ ರಾಯಚೂರಿಗೆ (ರಸ್ತೆ ಮಾರ್ಗ) ಆಗಮಿಸಲಿದ್ದಾರೆ. ನಗರಕ್ಕೆ ಬಂದ ಬಳಿಕ ನಿಗದಿಯಂತೆ ಮಧ್ಯಾಹ್ನ 3:30ರಿಂದ 5 ಗಂಟೆಯವರಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ. ಬಳಿಕ ಹೊಸಪೇಟೆಗೆ ತೆರಳಲಿದ್ದಾರೆ.