ರಾಯಚೂರು: ದೇಶಾದ್ಯಂತ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ತೀವ್ರ ಸ್ವರೂಪದ ಹೋರಾಟ ನಡೆಯುತ್ತಿದ್ದು, ಇತ್ತ 144 ಸೆಕ್ಷನ್ ಜಾರಿಯ ನಡುವೆ ಜಿಲ್ಲೆಯಲ್ಲಿನ ಭಗತ್ ಸಿಂಗ್ ವೃತ್ತದಲ್ಲಿ ಎಸ್.ಯು.ಸಿ.ಐ (ಕಮ್ಯೂನಿಸ್ಟ್) ವತಿಯಿಂದ ಪ್ರತಿಭಟನೆ ನಡೆಯಿತು.
ರಾಯಚೂರಿನಲ್ಲಿ ಎಸ್.ಯು.ಸಿ.ಐ ವತಿಯಿಂದ ಪ್ರತಿಭಟನೆ: ಪ್ರತಿಭಟನಾಕಾರರ ಬಂಧನ
ಸಿಎಎ ಹಾಗೂ ಎನ್ಆರ್ಸಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಜಿಲ್ಲೆಯಲ್ಲಿನ ಭಗತ್ ಸಿಂಗ್ ವೃತ್ತದಲ್ಲಿ ಎಸ್.ಯು.ಸಿ.ಐ( ಕಮ್ಯೂನಿಸ್ಟ್) ವತಿಯಿಂದ ಪ್ರತಿಭಟನೆ ನಡೆಯಿತು.
ಎಸ್.ಯು.ಸಿಐ ಪ್ರತಿಭಟನೆ
ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಭಟನೆ ನಡೆಸದಂತೆ ಪೊಲೀಸರು ಮನವಿ ಮಾಡಿದರೂ ಭಗತ್ ಸಿಂಗ್ ವೃತ್ತದಲ್ಲಿ ಹಲವಾರು ಕಾರ್ಯಕರ್ತರು, ನಾಗರಿಕರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರ ಮನವೊಲಿಸಿದ್ರೂ ಅವರು ಬಗ್ಗಲಿಲ್ಲ. ಕೆಲ ಕಾಲ ಶಾಂತಿಯುತವಾಗಿ ನಡೆಸಿ ನಂತರ ಉಗ್ರ ಸ್ವರೂಪ ಪಡೆದ ಪ್ರತಿಭಟನೆ ಹತೋಟಿಗೆ ತರಲು ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.