ರಾಯಚೂರು:ಕೊರೊನಾ ನಿಯಂತ್ರಣಕ್ಕಾಗಿ ರಾಯಚೂರಲ್ಲಿ ಲಾಕ್ಡೌನ್ ಮುಂದುವರಿಸಿದ್ದು, ಮಧ್ಯಾಹ್ನ 12ಗಂಟೆಯವರೆಗೆ ಕಾಲಮಿತಿ ನೀಡಲಾಗಿದೆ. ಆದರೆ ನಗರದಲ್ಲಿ 12 ಗಂಟೆ ನಂತರವೂ ಅಲ್ಲಲ್ಲಿ ಜನ ಓಡಾಡುವುದು ಕಂಡುಬಂದ ಹಿನ್ನೆಲೆ ಪೊಲೀಸರು ಜನರನ್ನು ಚದುರಿಸಲು ಮುಂದಾಗಿದ್ದಾರೆ.
ಈ ನಡುವೆ ನಗರದ ಸದರ್ ಬಜಾರ್ ಬಳಿ ವ್ಯಕ್ತಿವೋರ್ವ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿರುವುದು ಸಹ ಕಂಡುಬಂದಿದೆ. ವೈದ್ಯ ಎಂದು ಹೇಳಿಕೊಂಡ ವ್ಯಕ್ತಿ ಐಟಿ ಕಾರ್ಡ್ ತೋರಿಸು ಎಂದಾಗ ಪೊಲೀಸರೊಂದಿಗೆ ಮಾತಿಗಿಳಿದಿದ್ದ. ಅಲ್ಲದೆ ವೈದ್ಯಕೀಯ ಗುತುತಿನ ಚೀಟಿಯ ಬದಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಟ್ ತೋರಿಸಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ.