ರಾಯಚೂರು:ಮಟಮಾರಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ವೇಳೆ ಜನಜಂಗುಳಿ ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.
ರಥೋತ್ಸವ ವೇಳೆ ನೂಕುನುಗ್ಗಲು: ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಟಮಾರಿ ಗ್ರಾಮದಲ್ಲಿ ಗುರುವಾರ ಸಂಜೆ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆ, ರಥೋತ್ಸವ ನಡೆಯುತ್ತಿತ್ತು. ಕೊರೊನಾ ಕಾರಣದಿಂದಾಗಿ ಸರಳವಾಗಿ ರಥೋತ್ಸವ ನಡೆಸಲು ದೇವಾಲಯದ ಕಮಿಟಿ ತೀರ್ಮಾನಿಸಲಾಗಿತ್ತು.
ಈ ಹಿನ್ನೆಲೆ, ಸೀಮಿತ ಜಾಗದವರೆಗೆ ರಥ ಎಳೆಯಲು ಅಷ್ಟೇ ಪ್ರಮಾಣದ ಹಗ್ಗ ಹಾಕಲಾಗಿತ್ತು. ಆದರೆ, ರಥೋತ್ಸವಕ್ಕೆ ಬಂದ ಭಕ್ತರು ಪ್ರತಿವರ್ಷದಂತೆ ಹಗ್ಗವನ್ನು ಎಳೆದಾಡತೊಡಗಿದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಇನ್ನು, ರಥ ಎಳೆಯುವಾಗ ಹಗ್ಗ ತುಂಡಾಗಿದೆ ಎನ್ನಲಾಗುತ್ತಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.