ರಾಯಚೂರು:ನಗರದಲ್ಲಿ ಮಾಸ್ಕ್ ಧರಿಸದೆ ವಾಹನ ಸವಾರಿ ಮಾಡುತ್ತಿರುವ ಸವಾರರನ್ನು ತಡೆದ ಪೊಲೀಸರು ದಂಡ ವಿಧಿಸಿದ್ದಾರೆ.
ಮಾಸ್ಕ್ ಧರಿಸದೆ ವಾಹನ ಚಾಲನೆ: ಪೊಲೀಸರಿಂದ ದಂಡ ಪ್ರಯೋಗ - ರಾಯಚೂರು ಸುದ್ದಿ
ರಾಯಚೂರು ನಗರದಲ್ಲಿ ಮಾಸ್ಕ್ ಧರಿಸದೆ ಆರಾಮವಾಗಿ ತಿರುಗಾಡುತ್ತಿರುವ ವಾಹನ ಸವಾರರಿಗೆ ಪೊಲೀಸರು ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ದಂಡ
ಕೊರೊನಾ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿದ್ದು, ನಗರದ ಜನರಲ್ಲಿ ಜಾಗೃತಿ ಕೊರತೆಯೋ ಅಥವಾ ಅಸಡ್ಡೆಯೋ.. ಮಾಸ್ಕ್ ಧರಿಸದೆ ಆರಾಮವಾಗಿ ತಿರುಗಾಡುತ್ತಿರುವ ವಾಹನ ಸವಾರರಿಗೆ ನಗರದ ಸೂಪರ್ ಮಾರ್ಕೆಟ್ ವೃತ್ತದಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ.
ಸದರ ಬಜಾರ್ ಪೊಲೀಸರು ಮಾಸ್ಕ್ ಧರಿಸದ ವಾಹನ ಸವಾರರನ್ನು ಹಿಡಿದು ಪ್ರತಿಯೊಬ್ಬರಿಗೆ ₹200 ದಂಡ ವಿಧಿಸಿದ್ದು, ಸುಮಾರು ಐವತ್ತಕ್ಕೂ ಹೆಚ್ಚಿನ ವಾಹನ ಸವಾರರಿಗೆ ದಂಡ ಹಾಕಲಾಗಿದೆ.