ರಾಯಚೂರು: ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯದಿಂದ ವಾಪಸ್ ಕರೆದೊಯ್ಯುವ ವೇಳೆ ಮೂವರು ಆರೋಪಿಗಳು ಎಸ್ಕೇಪ್ ಆಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ನ್ಯಾಯಾಲಯದಿಂದ ಮಹಾರಾಷ್ಟ್ರ ಮೂಲದ ಆರೋಪಿ1- ಹಶ್ಯಾ ಅಲಿಯಾಸ್ ರಮೇಶ ಸಿಂಧೆ ಬೂದನಾಳ, ಎ2-ಇಶ್ರಾಮ ಅಲಿಯಾಸ್ ರಾಜೇಶ ಖನ್ನಾ ಹಾಗೂ ಎ4- ಪಲ್ಲು ಗೋವಿಂದ ಅರ್ಜುನ್ ಬೋಸ್ಲೆ ಎಂಬ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಮಾನವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇವರ ಪೈಕಿ ಓರ್ವ ಆರೋಪಿ ಮೃತಪಟ್ಟಿದ್ದರೆ, ಉಳಿದ ಆರು ಆರೋಪಿಗಳಲ್ಲೊರ್ವ ಪತ್ತೆಯಾಗಿಲ್ಲ. ಇನ್ನುಳಿದ ಐವರಲ್ಲಿ ಮೂವರನ್ನು ಬಂಧಿಸಲಾಗಿತ್ತು.