ರಾಯಚೂರು :ರೈಲ್ವೆ ಟ್ರ್ಯಾಕ್ ಮೇಲೆ ಮಲಗಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ಟ್ರ್ಯಾಕ್ ಮೇಲೆ ಮಲಗಿ ವ್ಯಕ್ತಿ ಆತ್ಮಹತ್ಯೆ - Man commits suicide in raichur
ಮೃತ ದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ರೈಲ್ವೆ ಟ್ರ್ಯಾಕ್ ಮೇಲೆ ಮಲಗಿ ವ್ಯಕ್ತಿ ಆತ್ಮಹತ್ಯೆ
ರೈಲು ಬರುವ ವೇಳೆ ಟ್ರ್ಯಾಕ್ ಮೇಲೆ ಮಲಗಿದ ಪರಿಣಾಮ ವ್ಯಕ್ತಿಯ ದೇಹ ಎರಡು ಭಾಗವಾಗಿದೆ. ಮೃತ ವ್ಯಕ್ತಿಯನ್ನ ಸಿಯಾತಲಾಬ್ ಏರಿಯಾದ ರಾಜಯ್ಯ(28) ಎಂದು ಗುರುತಿಸಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ. ಮೃತ ದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.