ಕರ್ನಾಟಕ

karnataka

ETV Bharat / state

ಮಂತ್ರಾಲಯದಲ್ಲಿ ಲಕ್ಷ ದೀಪೋತ್ಸವ, ತುಂಗಾರತಿ ಸಂಭ್ರಮ - ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಾರ್ತಿಕ ಪೌರ್ಣಿಮಾ ನಿಮಿತ್ತ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಚಾಲನೆ ನೀಡಿದರು.

ಮಂತ್ರಾಲಯದಲ್ಲಿ ಕಾರ್ತಿಕ ಪೌರ್ಣಿಮಾ ಅಂಗವಾಗಿ ಲಕ್ಷ ದೀಪೋತ್ಸವ
ಮಂತ್ರಾಲಯದಲ್ಲಿ ಕಾರ್ತಿಕ ಪೌರ್ಣಿಮಾ ಅಂಗವಾಗಿ ಲಕ್ಷ ದೀಪೋತ್ಸವ

By

Published : Nov 6, 2022, 10:46 PM IST

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಾರ್ತಿಕ ಪೌರ್ಣಿಮಾ ಅಂಗವಾಗಿ ಲಕ್ಷ ದೀಪೋತ್ಸವ ಹಾಗೂ ತುಂಗಾರತಿ ಕಾರ್ಯಕ್ರಮ ಭಾನುವಾರ ಸಂಜೆ ಅದ್ಧೂರಿಯಾಗಿ ನಡೆಯಿತು.

ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಎದುರು ಕಾರ್ತಿಕ ಪೌರ್ಣಿಮಾ ನಿಮಿತ್ತ ಆಯೋಜಿಸಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಚಾಲನೆ ನೀಡಿದರು.

ಮಂತ್ರಾಲಯದಲ್ಲಿ ಕಾರ್ತಿಕ ಪೌರ್ಣಿಮಾ ಅಂಗವಾಗಿ ಲಕ್ಷ ದೀಪೋತ್ಸವ

ನಂತರ ಶ್ರೀಮಠದಿಂದ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತುಂಗಭದ್ರಾ ನದಿ ತೀರದವರೆಗೆ ಕೊಂಡೊಯ್ಯಲಾಯಿತು. ಬಳಿಕ ಪುಣ್ಯನದಿ ಆರತಿ ಕಾರ್ಯಕ್ರಮ ನೆರವೇರಿಸಿದರು. ಲಕ್ಷ ದೀಪೋತ್ಸವ ಭಕ್ತರು ದೀಪ ಬೆಳಗುವುದರ ಮೂಲಕ ಶ್ರೀರಾಯರಿಗೆ ಭಕ್ತಿ ಸಮರ್ಪಣೆ ಮಾಡಿದರು. ನಂತರ ಶ್ರೀಮಠದ ಪಂಡಿತರು ಹಾಗೂ ಅಧಿಕಾರಿಗಳು, ಭಕ್ತರು ಪುಣ್ಯನದಿ ಆರತಿ ಮಾಡಿದರು. ಈ ವೇಳೆ ನೆರೆದ ಭಕ್ತರಿಗೆ ಪೀಠಾಧಿಪತಿಗಳು ಅನುಗ್ರಹ ಸಂದೇಶ ನೀಡಿ, ಆಶೀರ್ವಚನ ನೀಡಿದರು.

ಓದಿ:ಮಂತ್ರಾಲಯ ಮಠಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​ವೈ ಭೇಟಿ

ABOUT THE AUTHOR

...view details