ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಎದೆನೋವಿನಿಂದ ಕೂಲಿ ಕಾರ್ಮಿಕ ಸಾವು.. - etv bharat

ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ ಸಾಗಿಸಿದ್ರು, ಚಿಕಿತ್ಸೆ ಫಲಕಾರಿಯಾಗದೆ ಸ್ವಾನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ತಡವಾಗಿ ಬೆಳಕಿಗೆ ಬಂದಿದೆ.

ರಾಯಚೂರಿನಲ್ಲಿ ಕೂಲಿ ಕಾರ್ಮಿಕ ಸಾವು

By

Published : Jul 21, 2019, 11:33 PM IST

ರಾಯಚೂರು:ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಎದೆನೋವಿನಿಂದ ಸಾವಿಗೀಡಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ

ಜಿಲ್ಲೆಯ ಸಿರವಾರ ತಾಲೂಕಿನ‌ ಚಾಗಭಾವಿ ಗ್ರಾಮದಲ್ಲಿ ಬಳಿ ಈ ಘಟನೆ ನಡೆದಿದೆ. ಪಂಪಣ್ಣ(55) ಮೃತ ಕಾರ್ಮಿಕ. ಶನಿವಾರ ಚಾಗಭಾವಿ ಗ್ರಾಮದ ಹಳ್ಳದಲ್ಲಿ ಹೂಳು ತೆಗೆಯವ ಕಾಮಗಾರಿ ನಡೆಯುತಿತ್ತು. ಈ ವೇಳೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಪಂಪಣ್ಣನಿಗೆ ಎದೆ ನೋವು ಕಾಣಿಸಿಕೊಂಡಿದೆ. ಆಗ ಅಲ್ಲಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಪಂಪಣ್ಣ ಮೃತಪಟ್ಟಿದ್ದಾನೆ. ಘಟನೆಯ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ಗಭಾವಿ ಗ್ರಾಮದ ಹಳ್ಳದಲ್ಲಿ ಹೂಳು ತೆಗೆಯವ ಕಾಮಗಾರಿ

ಘಟನೆಯ ಸಂಬಂಧ ಈಟಿವಿ ಭಾರತ್ ಚಾಗಭಾವಿ ಗ್ರಾ.ಪಂ.ನ ಮೈನುದ್ದೀನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಪಂಪಣ್ಣ ಶನಿವಾರ ಕೂಲಿ ಕೆಲಸಕ್ಕೆ ತೆರಳಿದ್ದಾನೆ. ಆಗ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಅಲ್ಲಿಂದ ಆಸ್ಪತ್ರೆಗೆ ಸಾಗಿಸಲು ವಾಹನ ಸಮಯಕ್ಕೆ ಸರಿಯಾಗಿ ಸಿಕ್ಕಿಲ್ಲ. ಆದ್ರೂ ತಡವಾಗಿ ವಾಹನ ಬಂದ ಬಳಿಕ ರಾಯಚೂರು‌ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಮೇಲಾಧಿಕಾರಿಗೆ ವರದಿ ಸಲ್ಲಿಸಿ, ಬಳಿಕ ಅಧಿಕಾರಿಗಳ ಆದೇಶದ ಮೆರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details