ರಾಯಚೂರು:ಕೂಲಿ-ಕಾರ್ಮಿಕರಿಗೆ, ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ಒಂದು ತಿಂಗಳ ವೇತನವನ್ನ ತಾಲೂಕಾಡಳಿತಕ್ಕೆ ನೀಡುವುದಾಗಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದ್ದಾರೆ.
ಬಡವರ ಅಗತ್ಯ ವಸ್ತುಗಳ ಪೂರೈಕೆಗೆ ಒಂದು ತಿಂಗಳ ವೇತನ ನೀಡಿದ ಶಾಸಕ - ರಾಜಾ ವೆಂಕಟಪ್ಪ ನಾಯಕ
ಲಾಕ್ ಡೌನ್ನಿಂದಾಗಿ ತೊಂದರೆ ಅನುಭವಿಸುತ್ತಿರುವ ಕೂಲಿ-ಕಾರ್ಮಿಕರು ಹಾಗೂ ಬಡವರ ಅಗತ್ಯ ವಸ್ತುಗಳ ಪೂರೈಕೆಗಾಗಿ ತಮ್ಮ ಒಂದು ತಿಂಗಳ ವೇತನ ನೀಡುವುದಾಗಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದ್ದಾರೆ.
ಶಾಸಕ ರಾಜಾ ವೆಂಕಟಪ್ಪ ನಾಯಕ
ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಇಂದು ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಅಲ್ಲದೇ ಜನರಿಗೆ ತೊಂದರೆಯಾಗದಂತೆ ದಿನನಿತ್ಯದ ವಸ್ತುಗಳು, ಆಹಾರ, ಪದಾರ್ಥಗಳ ಸಿಗುವಂತೆ ಕ್ರಮಕ್ಕೆ ಸೂಚಿಸಿದರು. ಕೂಲಿ-ಕಾರ್ಮಿಕರಿಗೆ, ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ತಮ್ಮ ಒಂದು ತಿಂಗಳ ವೇತನ ನೀಡುವುದಾಗಿ ಶಾಸಕರು ಸಭೆಯಲ್ಲಿ ತಿಳಿಸಿದ್ದಾರೆ.