ಕರ್ನಾಟಕ

karnataka

ETV Bharat / state

ಲಾಕ್​ ಡೌನ್: ರಾಯಚೂರಲ್ಲಿ ನಿಲ್ಲದ ವ್ಯಾಪಾರ ವಹಿವಾಟು

ಲಾಕ್​ಡೌನ್​ ನಡುವೆಯೂ ರಾಯಚೂರಿನ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಜನರು ವ್ಯಾಪಾರ ವ್ಹಿವಾಟಿನಲ್ಲಿ ತೊಡಗಿದ್ದು, ಜಿಲ್ಲಾಡಳಿತದ ಕ್ರಮಕ್ಕೆ ಜನ ಕ್ಯಾರೆ ಎನ್ನುತ್ತಿಲ್ಲ.

raichur
ರಾಯಚೂರು

By

Published : Mar 25, 2020, 1:49 PM IST

ರಾಯಚೂರು:ಮಾರ್ಚ್​ 14 ರ ವರೆಗೆ ಲಾಕ್​ ಡೌನ್​ ಮಾಡಿದ್ದರೂ ಕೂಡ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಸಾರ್ವಜಿನಿಕರು ವ್ಯಾಪಾರ, ವಹಿವಾಟು ನಡೆಸಿದ್ದಾರೆ.

ಕೊರೊನಾ ಭೀತಿ ಹೆಚ್ಚಾಗುತ್ತಿರುವ ಕಾರಣ ಜನರು ಬೀದಿಗೆ ಬಾರದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ, ಅದನ್ನೂ ಮೀರಿ ಜನರು ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಸಲು ರಸ್ತೆಗಿಳಿದಿದ್ದಾರೆ.

ರಾಯಚೂರಿನ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಲಾಕ್​ಡೌನ್​​ಗೆ ಕೇರ್​ ಮಾಡದೆ ಜನ ವ್ಯಾಪಾರದಲ್ಲಿ ತೊಡಗಿದ್ದರು.

ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಹೊರಡಿಸಿದ್ದರೂ ಕೂಡ ಜನತೆ ಅರ್ಥ ಮಾಡಿಕೊಳ್ಳದೆ ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ABOUT THE AUTHOR

...view details