ಕರ್ನಾಟಕ

karnataka

ETV Bharat / state

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಮತದಾನ ಬಹಿಷ್ಕಾರ: ಗ್ರಾಮಸ್ಥರ ಎಚ್ಚರಿಕೆ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಮತದಾನ ಬಹಿಷ್ಕಾರ ಮಾಡೋದಾಗಿ ರಾಯಚೂರಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

By

Published : Mar 15, 2019, 2:21 PM IST

ಕುಡಿಯುವ ನೀರಿನ ಸಮಸ್ಯೆ

ರಾಯಚೂರು:ತಾಲೂಕಿನ ವಡ್ಲೂರು,ಚಿಕ್ಕ ವಡ್ಲೂರು ಹಾಗೂ ಹನುಮಾನದೊಡ್ಡಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಮುಗಿದರೂ ನೀರು ಸರಬರಾಜು ಮಾಡುತ್ತಿಲ್ಲ. ಒಂದು ವಾರದ ಒಳಗೆ ನೀರು ಸರಬರಜು ಮಾಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

2016-17ನೇ ಸಾಲಿನಲ್ಲಿ ಬಹುಗ್ರಾಮ ಕುಡಿಯುವ ಯೋಜನೆಯಡಿ 45 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈಗ ಪೈಪ್ ಲೈನ್, ಟ್ಯಾಂಕ್ ಕೂಡಿಸಿ ಕಾಮಗಾರಿ ಮುಗಿದರೂ ಈ ವರೆಗೆ ನೀರು ಸರಬರಾಜುಮಾಡಿಲ್ಲ. ಇದರಿಂದ ಗ್ರಾಮಸ್ಥರು ದೂರದ ಗ್ರಾಮಗಳಿಗೆ ಸೈಕಲ್, ತಳ್ಳುವ ಬಂಡಿಗಳ ಮೂಲಕ ನೀರು ತರಬೇಕಾಗಿದೆ.

ಕುಡಿಯುವ ನೀರಿನ ಸಮಸ್ಯೆ

ಅಲ್ಲದೆ ನಗರಸಭೆಯಿಂದ ಚಿಕ್ಕಸುಗುರಿನಿಂದ ನೀರು ಶುದ್ಧೀಕರಣ ಘಟಕದ ಮೂಲಕ ನೀರುಸರಬರಾಜು ಕಾಮಗಾರಿ ಮಾಡಿದರೂ ಪೈಪ್ ಜೋಡಣೆ ಮಾಡದೆಅಧಿಕಾರಿಗಳು ಮೀನಾಮೇಶ ಎಣಿಸುತ್ತಿದ್ದಾರೆ ಎಂದು ದೂರಿದ್ದಾರೆ.

ನೀರು ಶುದ್ಧೀಕರಣ ಘಟಕ ನಿರ್ಮಾಣ, ಪೈಪ್ ಲೈನ್​ಗೆ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಸರಕಾರಕ್ಕೆ ನೀಡಿದ್ದರೂಕುಡಿಯುವ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ನಗಸಭೆಯಿಂದ ಯದ್ಲಾಪುರ ಗ್ರಾಮಕ್ಕೆ ಕುಡಿಯುವ ನೀರಿನ ಟ್ಯಾಪ್ (ತೊಟ್ಟಿ)ಮಂಜುರಾಗಿದ್ದು ನೀರು ಪೂರೈಕೆ ಮಾಡಲಾಗುತ್ತಿಲ್ಲ. ಒಂದು ವಾರದೊಳಗೆ ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಲೊಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ABOUT THE AUTHOR

...view details