ಕರ್ನಾಟಕ

karnataka

ETV Bharat / state

ಮಳೆಯಾರ್ಭಟಕ್ಕೆ ನಲುಗಿದ ಮಂತ್ರಾಲಯ.. ಭಕ್ತರು ಸೇರಿದಂತೆ ರಾಯಚೂರು ಜನತೆಯಲ್ಲಿ ಆತಂಕ!

ಹಳ್ಳಕೊಳ್ಳಗಳು ತುಂಬಿ ರಸ್ತೆಗಳು ಜಲಾವೃತವಾಗಿವೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಕೆಲವರ ಬೈಕ್​ಗಳು ಕೊಚ್ಚಿಹೋಗಿವೆ. ಮಳೆ ಮತ್ತೂ ಜೋರಾದರೆ ಏನು ಗತಿ ಎಂಬ ಚಿಂತೆಯಲ್ಲಿ ಜನರಿದ್ದಾರೆ..

heavy rain in raichur
ಮಳೆಯಾರ್ಭಟ

By

Published : Jun 27, 2021, 5:59 PM IST

ರಾಯಚೂರು:ಸುತ್ತಲೂ ನೀರೇ ನೀರು. ನೀರಿನಲ್ಲಿ ಮುಳುಗಿದ ವಾಹನಗಳು. ಸಂಚಾರಕ್ಕೆ ಹೆಣಗಾಡುತ್ತಿರುವ ಜನರು. ಹಳ್ಳ ಕೊಳ್ಳದಲ್ಲಿ ತೇಲಿ ಹೋದ ಬೈಕುಗಳು. ಗುರುರಾಯರ ದರ್ಶನಕ್ಕೆ ಅಡ್ಡಿಯಾಯಿತೆಂಬ ಚಿಂತೆಯಲ್ಲಿ ಭಕ್ತರು.

ಕಳೆದ ರಾತ್ರಿ ರಾಯಚೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿ ಅವಾಂತರ ಸೃಷ್ಟಿಸಿಬಿಟ್ಟಿದೆ. ಇತ್ತ ಮಂತ್ರಾಲಯದಲ್ಲೂ ಮಳೆಯ ಅಬ್ಬರ ಜೋರಾಗಿದೆ. ರಾಯರ ಮಠದ ಆವರಣದೊಳಗೂ ನೀರು ನುಗ್ಗಿದೆ. ಕರ್ನಾಟಕ ಗೆಸ್ಟ್ ಹೌಸ್ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಆರ್ಭಟಿಸುತ್ತಿದೆ ಮುಂಗಾರು ಮಳೆ..

ಹಳ್ಳಕೊಳ್ಳಗಳು ತುಂಬಿ ರಸ್ತೆಗಳು ಜಲಾವೃತವಾಗಿವೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಕೆಲವರ ಬೈಕ್​ಗಳು ಕೊಚ್ಚಿಹೋಗಿವೆ. ಮಳೆ ಮತ್ತೂ ಜೋರಾದರೆ ಏನು ಗತಿ ಎಂಬ ಚಿಂತೆಯಲ್ಲಿ ಜನರಿದ್ದಾರೆ.

ಇದನ್ನೂ ಓದಿ:ರಾಜ್ಯಾದ್ಯಂತ ಭಾನುವಾರವೂ ರಜೆ ಕೊಡದ ಮಳೆರಾಯ : ಕರಾವಳಿಯಲ್ಲಿ ಭಾರಿ ಮಳೆ, 'ಹೈ-ಕ' ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್

ABOUT THE AUTHOR

...view details