ಕರ್ನಾಟಕ

karnataka

ETV Bharat / state

ರಾಯಚೂರು: ಅನುಮಾನಾಸ್ಪದ ರೀತಿ ಗ್ರಾಮ ಪಂಚಾಯತ್​ ಪಿಡಿಒ ಶವ ಪತ್ತೆ - ಪಿಡಿಒ ಶವ ಪತ್ತೆ

ದೇವರಭೂಪುರ ಗ್ರಾಮದ ಪಿಡಿಒ ಗಜದಂಡಯ್ಯ ಸ್ವಾಮಿ ಎಂಬುವರ ಮೃತದೇಹ ಲಿಂಗಸೂಗೂರು ಪಟ್ಟಣದ ಹೊರವಲಯದ ಹೆದ್ದಾರಿ ರಸ್ತೆ ಬಳಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

raichur
ರಾಯಚೂರು

By

Published : Oct 6, 2022, 12:46 PM IST

ರಾಯಚೂರು: ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಹೊರವಲಯದ ಹೆದ್ದಾರಿ ರಸ್ತೆ ಬಳಿ ಗ್ರಾಮ ಪಂಚಾಯತ್​ ಪಿಡಿಒ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ದೇವರಭೂಪುರ ಗ್ರಾಮದ ನಿವಾಸಿ ಹಾಗೂ ಪಿಡಿಒ ಗಜದಂಡಯ್ಯ ಸ್ವಾಮಿ (51) ಮೃತರು. ಬನ್ನಿ ಕೊಡುವ ನೆಪದಲ್ಲಿ ಮನೆಗೆ ಬಂದು ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ:ರಾಯಚೂರಿನಲ್ಲಿ ಕಾಣೆಯಾಗಿದ್ದ ನಾಲ್ವರು ಪಿಯು ವಿದ್ಯಾರ್ಥಿನಿಯರು ಪತ್ತೆ

ಲಿಂಗಸೂಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿದೆ ಎಂದು ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಕೊಲೆ ನಡೆದ ಸ್ಥಳದ ಬಳಿ ಇರೋ ರಸ್ತೆ ಮೇಲೆ ಬೈಕ್, ಚಪ್ಪಲಿ ಹಾಗೂ ಹೆಲ್ಮೆಟ್ ಇಟ್ಟಿರುವುದು ಕಂಡುಬಂದಿದೆ.

ABOUT THE AUTHOR

...view details