ಕರ್ನಾಟಕ

karnataka

ETV Bharat / state

ರೈತರಿಗೆ ಭೂಮಿ ಕೊಡಿಸೋದಾಗಿ ವಂಚಿಸಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡರು, ಸಂಘದ ಹಂಗಾಮಿ ಅಧ್ಯಕ್ಷ ವಾಸುದೇವ ಮೇಟಿ ಅವರನ್ನು ರೈತರ ಸಮಸ್ಯೆ ಬಗೆಹರಿಸಲು ನೇಮಕ ಮಾಡಿತ್ತು.

ರೈತ ಸಂಘ.

By

Published : Jul 26, 2019, 2:09 PM IST

ರಾಯಚೂರು: ಭೂಮಿ ಮಂಜೂರು ಮಾಡಿಸುತ್ತೇನೆಂದು ರೈತರಿಂದ ಹಣ ಪಡೆದ ಆರೋಪ ಹಾಗೂ ವೈಟಿಪಿಎಸ್ ನಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದ ಆರೋಪದ ಮೇರೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ ಅವರನ್ನು ವಜಾ ಮಾಡಲಾಗಿದೆ.

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡರು, ಸಂಘದ ಹಂಗಾಮಿ ಅಧ್ಯಕ್ಷ ವಾಸುದೇವ ಮೇಟಿ ಅವರನ್ನು ರೈತರ ಸಮಸ್ಯೆ ಬಗೆಹರಿಸಲು ನೇಮಕ ಮಾಡಿತ್ತು.

ರೈತ

ಆದರೆ ಸಮಸ್ಯೆಯನ್ನೇ ಬಂಡವಾಳ ಆಗಿಸಿಕೊಂಡಿದ್ದಲ್ಲದೇ ರೈತರಿಂದ ಹಣ ಪಡೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇರೆಗೆ ರಾಜ್ಯ ಸಮಿತಿ ಅವರನ್ನು ವಜಾ ಮಾಡಿದೆ ಎಂದು ತಿಳಿಸಿದರು.

ಮೇಟಿ ಅವರು ಲಿಂಗನಖಾನ್ ದೊಡ್ಡಿ ಗ್ರಾಮದ ರೈತರಿಗೆ ಭೂಮಿ ಮಂಜೂರು ಮಾಡಿಸುತ್ತೇನೆಂದು ರೈತರಿಂದ ₹1 ಲಕ್ಷ ರೂ. ಪಡೆದಿದ್ದಾರೆ ಹಾಗೂ ವೈಟಿಪಿಎಸ್, ಚಿಕ್ಕಸುಗೂರಿನ ವೈಟಿಪಿಸಿಎಲ್ ಕಾರ್ಖಾನೆ ಯಲ್ಲಿ ಉದ್ಯೋಗ ಕೊಡಿಸುವುದಾಗಿ ₹3 ಲಕ್ಷ ಹಣ ಪಡೆದಿದ್ದಾರೆ. ಅಲ್ಲದೇ, ಸಾಲ ಕೊಡಿಸುವುದಾಗಿ ನಾಗೇಂದ್ರ ಎಂಬುವವರಿಂದ ₹10 ಸಾವಿರ ಸೇರಿದಂತೆ ಅನೇಕರಿಂದ ವಿವಿಧ ಕೆಲಸ ಮಾಡಿಕೊಡುವುದಾಗಿ ಹಣ ಪಡೆದಿದ್ದಾರೆ ಎಂಬ ಆರೋಪದ ಮೇರೆಗೆ ಮೇಟಿ ಅವರನ್ನು ವಜಾ ಮಾಡಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details