ರಾಯಚೂರು:ನಾರಾಯಣಪುರ ಜಲಾಶಯದಿಂದ ಅಧಿಕ ನೀರು ಬಿಟ್ಟ ಪರಿಣಾಮ ಕೃಷ್ಣಾ ನದಿ ಪಾತ್ರದ ಗ್ರಾಮಗಳಿಗೆ ನೆರೆ ಭೀತಿ ಒಂದು ಕಡೆಯಾದ್ರೆ, ಮತ್ತೊಂದು ಕಡೆ ವಿಷ ಜಂತುಗಳ ಉಪಟಳ ಶುರುವಾಗಿದೆ.
ಕೃಷ್ಣಾ ನದಿ ಪಾತ್ರದ ಗ್ರಾಮಗಳಿಗೆ ನೆರೆ ಭೀತಿ: ವಿಷ ಜಂತುಗಳ ಉಪಟಳ - ನಾರಾಯಣಪುರ ಜಲಾಶಯ
ನಾರಾಯಣಪುರ ಜಲಾಶಯದಿಂದ ಅಧಿಕ ನೀರು ಬಿಟ್ಟ ಪರಿಣಾಮ ಕೃಷ್ಣಾ ನದಿ ಪಾತ್ರದ ಗ್ರಾಮಗಳಿಗೆ ನೆರೆ ಭೀತಿ ಒಂದು ಕಡೆಯಾದ್ರೆ, ಮತ್ತೊಂದು ಕಡೆ ವಿಷ ಜಂತುಗಳ ಉಪಟಳ ಶುರುವಾಗಿದೆ.
ಮೊಸಳೆ
ಕೃಷ್ಣೆ ಉಕ್ಕಿ ಹರಿಯುತ್ತಿರುವುದರಿಂದ ಮೊಸಳೆ, ಚೇಳು, ಹಾವುಗಳ ಕಾಟ ಎದುರಾಗಿದ್ದು, ಜನರಿಗೆ ಜೀವಭಯ ಶುರುವಾಗಿದೆ. ತಾಲೂಕಿನ ಯದ್ಲಾಪುರ ಗ್ರಾಮದ ಹತ್ತಿರವಿರುವ ರೈಲ್ವೆ ಸೇತುವೆ ನದಿ ದಂಡೆಯಲ್ಲಿ ಬೃಹದಾಕಾರದ ಮೊಸಳೆ ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿ ಮೂಡಿಸಿದೆ.
ಮುಳುಗಡೆ ಭೀತಿ ಎದುರಿಸುತ್ತಿದ್ದ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿನ ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದ್ದು, ಹಲವು ಗ್ರಾಮಗಳಲ್ಲಿ ಹಾವು, ಚೇಳುಗಳ ಕಾಟ ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದಾಗಿ ಜನರು ಮನೆ ಬಿಟ್ಟು ಹೊರ ಬರಲು ಆಗದಂತಹ ವಾತಾವರಣ ನಿರ್ಮಾಣವಾಗಿದೆ.