ಕರ್ನಾಟಕ

karnataka

ETV Bharat / state

ರಾಯಚೂರು ಶಾಲಾ ಕೊಠಡಿಯೊಳಗೆ ಬೆಂಕಿ: ಅಕ್ಕಿ ಚೀಲ, ಪುಸ್ತಕ, ಸೈಕಲ್​ಗಳು ಸುಟ್ಟು ಭಸ್ಮ - fire

ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯೊಂದರಲ್ಲಿ ಹತ್ತಕ್ಕೂ ಹೆಚ್ಚು ಅಕ್ಕಿ ಚೀಲಗಳು, ಏಳು ಸೈಕಲ್ ಹಾಗೂ ಪಠ್ಯ ಪುಸಕ್ತಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಆದ್ರೆ ಇಂದು ಬೆಳಗ್ಗೆ ಏಕಾಏಕಿ ಕೊಠಡಿಯೊಳಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಅಲ್ಲಿದ್ದ ವಸ್ತುಗಳೆಲ್ಲವೂ ಅಗ್ನಿಗಾಹುತಿಯಾಗಿವೆ.

fire in  government school room of raichur
ರಾಯಚೂರು ಶಾಲಾ ಕೊಠಡಿಯೊಳಗೆ ಬೆಂಕಿ; ಅಕ್ಕಿ ಚೀಲ, ಪುಸ್ತಕ, ಸೈಕಲ್​ಗಳು ಅಗ್ನಿಗಾಹುತಿ

By

Published : Mar 13, 2021, 4:52 PM IST

ರಾಯಚೂರು: ಶಾಲಾ ಕೊಠಡಿಯೊಳಗೆ ಬೆಂಕಿ ಕಾಣಿಸಿಕೊಂಡು ಕೊಠಡಿಯೊಳಗಿಟ್ಟಿದ್ದ ಆಹಾರ ಪದಾರ್ಥಗಳು, ಪುಸ್ತಕಗಳು, ಸೈಕಲ್​​ಗಳು ಬೆಂಕಿಗಾಹುತಿಯಾದ ಘಟನೆ ಜಿಲ್ಲೆಯ ಜಾಲಹಳ್ಳಿಯಲ್ಲಿ ನಡೆದಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಕೊಠಡಿ ಕೊರತೆ ಹಿನ್ನೆಲೆ ಪಕ್ಕದಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯೊಂದರಲ್ಲಿ ಹತ್ತಕ್ಕೂ ಹೆಚ್ಚು ಅಕ್ಕಿ ಚೀಲಗಳು, ಏಳು ಸೈಕಲ್ ಹಾಗೂ ಪಠ್ಯ ಪುಸಕ್ತಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಆದ್ರೆ ಇಂದು ಬೆಳಗ್ಗೆ ಏಕಾಏಕಿ ಕೊಠಡಿಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಅಲ್ಲೇ ಹತ್ತಿರದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಈ ವಿಷಯವನ್ನು ಶಿಕ್ಷಕರ ಗಮನಕ್ಕೆ ತಂದಿದ್ದು, ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ:ಟ್ರ್ಯಾಕ್ಟರ್ ಪಲ್ಟಿ; ಕೂಲಿ ಕಾರ್ಮಿಕರಿಗೆ ಗಾಯ

ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಅಕ್ಕಿ, ಪಠ್ಯಪುಸಕ್ತಗಳು ಮತ್ತು ಸೈಕಲ್ ಬೆಂಕಿಗೆ ಆಹುತಿಯಾಗಿವೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details