ರಾಯಚೂರು:ಸಾರಿಗೆ ಬಸ್ ಬೈಕ್ ಮೇಲೆ ಹರಿದಿದ್ದು ಬೈಕ್ನಲ್ಲಿದ್ದ ತಂದೆ-ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಯಚೂರಿನ ಕಲಮಲ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಅತ್ತನೂರು ಗ್ರಾಮದ ನಿಜಾನಂದಾ ಮಲ್ಲಪ್ಪ ಹಾಗೂಇವರ ಮಗ ನಿಜಾನಂದ ಎಂದು ಗುರುತಿಸಲಾಗಿದೆ. ಬೈಕ್ನಲ್ಲಿ ತಂದೆ- ಮಗ ಇಬ್ಬರೂ ರಾಯಚೂರು ಕಡೆಯಿಂದ ತಮ್ಮ ಸ್ವಗ್ರಾಮ ಮಾನವಿ ತಾಲೂಕಿನ ಅತ್ತನೂರುಕ್ಕೆ ತೆರಳುತ್ತಿದ್ದರು. ಈ ವೇಳೆ ಲಿಂಗಸೂಗೂರು ಕಡೆಯಿಂದ ಬರುತ್ತಿದ್ದ ಬಸ್ ಬೈಕ್ ಮೇಲೆ ಹರಿದ ಪರಿಣಾಮ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.