ಕರ್ನಾಟಕ

karnataka

ETV Bharat / state

ಅವಧಿ ಮುಗಿದ ಟೀ ಪೌಡರ್ ಖರೀದಿಸಿದ್ರೆ ತೊಗರಿ ಕೇಂದ್ರದಲ್ಲಿ ನೋಂದಣಿ: ರೈತರ ಆರೋಪ

ಸರ್ಕಾರದ ತೊಗರಿ ನೋಂದಣಿ ಕೇಂದ್ರದಲ್ಲಿ ಅವಧಿ ಮುಗಿದ ಟೀ (ಚಹಾ) ಪೌಡರ್ ಪಾಕೇಟ್ ಖರೀದಿ ಮಾಡಿದ್ರೆ ಮಾತ್ರ ತೊಗರಿ ಕೇಂದ್ರದ ಸಿಬ್ಬಂದಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

Farmers Purchase of Expired Tea Powder in Raichur
ತೊಗರಿ ನೋಂದಣಿ ಕೇಂದ್ರದಲ್ಲಿ ಅವಧಿ ಮುಗಿದ ಟೀ ಪೌಡರ್ ಮರಾಟ

By

Published : Jan 17, 2020, 5:22 PM IST

ರಾಯಚೂರು: ತೊಗರಿ ನೋಂದಣಿ ಕೇಂದ್ರದಲ್ಲಿ ಅವಧಿ ಮುಗಿದ ಟೀ (ಚಹಾ) ಪೌಡರ್ ಪಾಕೇಟ್ ಖರೀದಿ ಮಾಡಿದ್ರೆ ಮಾತ್ರ ತೊಗರಿ ಕೇಂದ್ರದ ಸಿಬ್ಬಂದಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ತೊಗರಿ ನೋಂದಣಿ ಕೇಂದ್ರದಲ್ಲಿ ಅವಧಿ ಮುಗಿದ ಟೀ ಪೌಡರ್ ಮರಾಟ

ರಾಯಚೂರಿನ ಎಪಿಎಂಸಿ ಆವರಣದಲ್ಲಿ ತೊಗರಿಗೆ ಸರ್ಕಾರ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ, ಇಂದಿನಿಂದ ತೊಗರಿ ಕೇಂದ್ರವನ್ನ ಆರಂಭಿಸಿದೆ. ಆದ್ರೆ ರೈತರು ತಮ್ಮ ತೊಗರಿ ಮಾರಾಟದ ನೋಂದಣಿ ಮಾಡಿಸಲು ಬಂದಾಗ ಕೇಂದ್ರ ಸಿಬ್ಬಂದಿ ರೈತರಿಂದ 50 ರೂಪಾಯಿ ಪಡೆದುಕೊಂಡು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಟೀ ಪೌಡರ್ ಖರೀದಿ ಮಾಡಿದ ರೈತನಿಗೆ ಬೇಗ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ, ಟೀ ಪೌಡರ್ ಖರೀದಿ ಮಾಡದ ರೈತರನ್ನು ಹಿಂದೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.

ಇನ್ನು ನೋಂದಣಿ ಕೇಂದ್ರದಲ್ಲಿ ವಿತರಣೆ ಮಾಡುತ್ತಿರುವ ಟೀ ಪೌಡರ್ ಅವಧಿ ಮುಗಿದು ಒಂದು ತಿಂಗಳಾಗಿದೆ. ಇದು ತಿಳಿದಿದ್ರೂ ಕೂಡ, ಟೀ ಪಾಕೇಟ್ ಹೆಸರಿನಲ್ಲಿ ಯಾವುದೇ ರಶೀದಿ ನೀಡಿದೆ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ನೋಂದಣಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details