ರಾಯಚೂರು: ಜಿಲ್ಲೆಯ ಲಿಂಗಸುಗೂರಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ಗೌಳಿಪುರ, ಕರಡಕಲ್ಲ ರಸ್ತೆ ಮೇಲೆ ಮಳೆ ಮತ್ತು ಚರಂಡಿ ನೀರು ಹರಿದು ಸಾರ್ವಜನಿಕರ ಆಕ್ರೋಶಕ್ಕೆ ದಾರಿ ಎಡೆಮಾಡಿಕೊಟ್ಟಿತ್ತು.
ಈ ಕುರಿತು ಈಟಿವಿ ಭಾರತ 'ಲಿಂಗಸುಗೂರಲ್ಲಿ ರಸ್ತೆಗಳ ಮೇಲೆಲ್ಲಾ ಹರಿದ ಚರಂಡಿ ನೀರು; ಪುರಸಭೆ ವಿರುದ್ಧ ಜನಾಕ್ರೋಶ' ಎಂಬ ಶಿರ್ಷಿಕೆಯಡಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿ ಪುರಸಭೆ ಅಧಿಕಾರಿಗಳು ಗೌಳಿಪುರದಲ್ಲಿ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡಿದೆ.