ಕರ್ನಾಟಕ

karnataka

ETV Bharat / state

ಹೊಸ ವರ್ಷಕ್ಕೆ ಕೇಕ್​ ತರಲು ಹೋದವರಲ್ಲಿ ಬದುಕುಳಿಯಲಿಲ್ಲ ಆತ, ನಾಲ್ವರು ಗಂಭೀರ - The rider died when the bikes collided

ಎರಡು ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದಿಂದಾಗಿ ಸವಾರ ಮೃತಪಟ್ಟಿದ್ದು, ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

deadly accident in raichur, one died, four injured
ಅಪಘಾತ

By

Published : Jan 1, 2020, 10:05 AM IST

ರಾಯಚೂರು: ಹೊಸ ವರ್ಷದ ಸಂಭ್ರಮಾಚರಣೆಗಾಗಿ ಕೇಕ್​​ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶ್ರೀಕಾಂತ್(24) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ. ರಾಯಚೂರಿನ ಕಡ್ಗಂದೊಡ್ಡಿ ಗ್ರಾಮದ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ.

ಜಖಂಗೊಂಡಿರುವ ಬೈಕ್​

ರಾಯಚೂರಿನಿಂದ ಕಡ್ಗಂದೊಡ್ಡಿ ಗ್ರಾಮಕ್ಕೆ ಹೊರಟ ಹೀರೋ ಹೊಂಡ ಬೈಕ್ ಹಾಗೂ ಬೂರ್ದಿಪಾಡದಿಂದ ರಾಯಚೂರಿಗೆ ಬರುತ್ತಿದ್ದ ಹೋಂಡಾ ಶೈನ್ ಬೈಕ್​ಗಳು ಪರಸ್ಪರ ಗುದ್ದಿಕೊಂಡಿವೆ. ಈ ವೇಳೆ ಸವಾರರು ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದರು ಎನ್ನಲಾಗಿದೆ.

ಜಖಂಗೊಂಡಿರುವ ಬೈಕ್​

ಹೀ ರೋಹೊಂಡ ಬೈಕ್​​ ಸವಾರರು ಹೊಸ ವರ್ಷಚರಣೆಗೆ ಕೇಕ್, ಬ್ಯಾನರ್ ತೆಗೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಮೃತ ವ್ಯಕ್ತಿಯ ಶವವನ್ನು ಶವಗಾರದಲ್ಲಿ ಇರಿಸಲಾಗಿದೆ. ಇನ್ನುಳಿದ ನಾಲ್ವರನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details