ಕರ್ನಾಟಕ

karnataka

ETV Bharat / state

ರೈಲ್ವೆ ಹಳಿ ಮೇಲೆ ಬಿದ್ದು ಯುವಕ ಸಾವು, ಸಿಡಿಲಿಗೆ ಕುರಿಗಾಹಿ ಬಲಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದುಗಲ್ ಹೋಬಳಿಯ ಬನ್ನಿಗೋಳ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಯಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ರಾಯಚೂರು
ರಾಯಚೂರು

By

Published : Apr 28, 2022, 10:11 PM IST

ರಾಯಚೂರು: ನಗರದ ರೈಲ್ವೆ ನಿಲ್ದಾಣದಲ್ಲಿನ ಮೂರನೇ ಪ್ಲಾಟ್ ಫಾರಂನ ಹಳಿಯ ಮೇಲೆ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಧಾರವಾಡ ಮೂಲದ ಶ್ರೀಕಾಂತ್ ಉಪ್ಪಿನ್ (35) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಶ್ರೀಕಾಂತ್ ಉಪ್ಪಿನಗೆ ವಿವಾಹವಾಗಿದ್ದು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ಮೃತದೇಹವನ್ನು ಸ್ಥಳದಿಂದ ತೆರವುಗೊಳಿಸಿ‌ ರಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ.

ಸಿಡಿಲು ಬಡಿದು ಕುರಿಗಾಯಿ ಮೃತ:ಲಿಂಗಸುಗೂರು ತಾಲೂಕಿನ ಮುದುಗಲ್ ಹೋಬಳಿಯ ಬನ್ನಿಗೋಳ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಯಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ರಾಮಪ್ಪ ಬಸಪ್ಪ ಪೂಜಾರಿ (35) ಸಾವಿಗೀಡಾದ ದುರ್ದೈವಿ ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕುರಿ ಕಾಯುತ್ತಿರುವ ವೇಳೆ ಏಕಾಏಕಿ ಸಿಡಿಲು ಬಡಿದು ಸ್ಥಳದಲ್ಲಿ ರಾಮಪ್ಪ ಮತ್ತು ಕುರಿಗಳು ಮೃತಪಟ್ಟಿವೆ ಎನ್ನಲಾಗುತ್ತಿದೆ. ಘಟನೆ ಸ್ಥಳಕ್ಕೆ ಮುದುಗಲ್ ಪೊಲೀಸರು ಹಾಗೂ ತಹಶೀಲ್ದಾರ್​ ದೌಡಾಯಿಸಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿಯಿಂದ ಆರೋಪಿ ಯುವತಿಯ ಬಂಧನ

ABOUT THE AUTHOR

...view details