ಕರ್ನಾಟಕ

karnataka

ETV Bharat / state

ಸಿಂಧನೂರು: ಮದುವೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿದ ಸ್ಟಾಫ್ ನರ್ಸ್‌ಗೆ ಕೊರೊನಾ ದೃಢ

ಮದುವೆಯಲ್ಲಿ ಭಾಗವಹಿಸಿದ ಜನರಿಗೆ ತಾಲೂಕಾಡಳಿತ ಸ್ವಯಂ ಪ್ರೇರಣೆಯಿಂದ ಕೋವಿಡ್-19 ಪರೀಕ್ಷೆಗೆ ಒಳಗಬೇಕು ತಿಳಿಸಲಾಗಿದೆ. ಅಲ್ಲದೇ ಮದುವೆಯಲ್ಲಿ ನವದಂಪತಿಗಳ ಗಂಟಲು ದ್ರವವನ್ನ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿ

Sindhanur
ಸಿಂಧನೂರು

By

Published : Jul 1, 2020, 5:12 PM IST

ಸಿಂಧನೂರು(ರಾಯಚೂರು): ಸಿಂಧನೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಸ್ಟಾಫ್ ನರ್ಸ್‌ಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಸಿಂಧನೂರು ಜನತೆ ಬಾರಿ ಆತಂಕವನ್ನು ಸೃಷ್ಟಿಸಿದೆ.

ಜಿಲ್ಲೆಯ ಸಿಂಧನೂರು ನಗರದ ವೆಂಕಟೇಶ್ವರ ಕಾಲೋನಿಯ ನಿವಾಸಿ ಮಾರ್ಟಿನ್ ದೇವಪ್ಪ ಮನೆಯವರ ವಿವಾಹ ಮಹೋತ್ಸವ ಜೂ. 20ರಿಂದ 21ರವರೆಗೆ ನಡೆದಿದೆ. ಈ ಮದುವೆಯಲ್ಲಿ ಬಂದ ಮಸ್ಕಿ ಸ್ಟಾಫ್ ನರ್ಸ್‌ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಪತ್ರಿಕಾ ಪ್ರಕಟಣೆ

ಹೀಗಾಗಿ ಮದುವೆಯಲ್ಲಿ ಭಾಗವಹಿಸಿದ ಜನರಿಗೆ ತಾಲೂಕಾಡಳಿತ ಸ್ವಯಂ ಪ್ರೇರಣೆಯಿಂದ ಕೋವಿಡ್-19 ಪರೀಕ್ಷೆಗೆ ಒಳಗಬೇಕು ತಿಳಿಸಲಾಗಿದೆ. ಅಲ್ಲದೇ ಮದುವೆಯಲ್ಲಿ ನವದಂಪತಿಯ ಗಂಟಲು ದ್ರವವನ್ನ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಪಟ್ಟಣದಲ್ಲಿ ಅಮರದೀಪ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಬಟ್ಟೆಗೆ ಅಂಗಡಿ ಹೋಗಿ ಬಂದವರು ಸಹ ಪರೀಕ್ಷೆಗೆ ಒಳಗಾಗುವಂತೆ ಪ್ರಕಟಣೆಯಲ್ಲಿ ತಾಲೂಕಾಡಳಿತ ಕೋರಿದೆ. ಮುಖ್ಯವಾಗಿ ಈ ಮದುವೆ ಸಮಾರಂಭದಲ್ಲಿ, ಬಟ್ಟೆ ಅಂಗಡಿಯ ಗರ್ಭಿಣಿಯರು ಇದ್ದರು ಹಾಗಾಗಿ ತಾಲೂಕಾಡಳಿತ ಗಮನಕ್ಕೆ ತರುವಂತೆ ಕೋರಲಾಗಿದೆ. ಇನ್ನು ಈ ಪ್ರಕರಣ ಸಿಂಧನೂರು ಜನರಿಗೆ ಆತಂಕವನ್ನು ಸೃಷ್ಟಿಸಿದೆ.

ABOUT THE AUTHOR

...view details