ರಾಯಚೂರು: ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಶೇಂಗಾ ಹಾಗೂ ಹತ್ತಿ ಬೆಳೆ ನಾಶವಾಗಿದೆ.
ರಾಯಚೂರಲ್ಲಿ ನಿರಂತರ ಮಳೆ: ಶೇಂಗಾ, ಹತ್ತಿ ಬೆಳೆ ನಾಶ - Peanuts, Cotton Crops Destroy
ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಕಿತ್ತಿರುವ ಶೇಂಗಾ ಮೊಳಕೆ ಬಂದು ಹಾಳಾಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ರಾಯಚೂರು ತಾಲೂಕಿನ ಗೋನವಾರ ಗ್ರಾಮದ ರಾಮಪ್ಪ ಎನ್ನುವ ರೈತ ತನ್ನ 3 ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಿದ್ದ. ಬಿತ್ತಿದ್ದ ಬೆಳೆ ಫಲ ನೀಡಿದ್ದು, ಕಳೆದ ನಾಲ್ಕು ದಿನಗಳಿಂದ ಶೇಂಗಾ ಕೀಳಲಾಗಿತ್ತು. ಆದ್ರೆ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಕಿತ್ತಿರುವ ಶೇಂಗಾ ಮೊಳಕೆ ಬಂದು ಹಾಳಾಗುತ್ತಿದೆ. ಇದರಿಂದ ರೈತ ನಷ್ಟ ಅನುಭವಿಸುತ್ತಿದ್ದು, ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ರಾಯಚೂರು ತಾಲೂಕಿನ ಸಾಥ್‌ಮೈಲ್ ಬಳಿ 10 ಎಕರೆ ಪ್ರದೇಶದಲ್ಲಿ ಬೆಳೆಯಲಾದ ಹತ್ತಿ ಬೆಳೆಯನ್ನ ರೈತ ಕಿತ್ತು ಹಾಕುತ್ತಿದ್ದಾನೆ. ಸತತವಾಗಿ ಮಳೆ ಸುರಿಯುತ್ತಿದ್ದು, ಹೊಲದಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಹೊಲದಲ್ಲಿ ಕಸ ಹೆಚ್ಚಾಗಿ ಶೇಖರಣೆಯಾಗುತ್ತಿದೆ. ಇದನ್ನ ತೆಗೆಯಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಸಿಗುವ ಕೂಲಿ ಕಾರ್ಮಿಕರು ದುಬಾರಿ ಕೂಲಿ ಕೇಳುತ್ತಿದ್ದಾರೆ. ಜೊತೆಗೆ ಮುಖ್ಯವಾಗಿ ರಸಗೊಬ್ಬರದ ಕೊರತೆ ಎದುರಾಗಿದೆ. ಅಲ್ಲದೆ ದುಬಾರಿ ಬೆಲೆಗೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಶ್ರಮ ವಹಿಸಿ ಬೆಳೆದ ರೈತ, ತನ್ನ ಕೈಯಾರೆ ಬೆಳೆಯನ್ನ ಕಿತ್ತು ಹಾಕುತ್ತಿದ್ದಾನೆ.