ರಾಯಚೂರು: ಕೊರೊನಾ ಲಾಕ್‌ಡೌನ್‌ನಿಂದ ರಾಯಚೂರಿನಲ್ಲಿ ಛತ್ತೀಸ್ಘಡದ ಕಾರ್ಮಿಕರು ಸಿಲುಕಿದ್ದಾರೆ. ನಗರದಲ್ಲಿ ಖಾಸಗಿ ಕಟ್ಟಡವೊಂದರ ಕೆಲಸಕ್ಕಾಗಿ ಹಲವು ದಿನಗಳಿಂದ ಬಂದು ನೆಲೆಸಿದ್ದರು. ಕಟ್ಟಡದ ಕೆಲಸ ಮುಗಿದಿದ್ದು, ನಮ್ಮ ಊರಿಗೆ ಹೋಗಬೇಕಾಗಿದೆ. ಆದರೆ ಲಾಕ್‌ಡೌನ್‌ನಿಂದ ಊರಿಗೆ ಹೋಗೋಕೆ ಆಗುತ್ತಿಲ್ಲ. ಹೀಗಾಗಿ ನಮ್ಮ ಊರಿಗೆ ಕಳುಹಿಸಿಕೊಂಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿ ಮಾಡಿದರು.
ಲಾಕ್‌ಡೌನ್‌ನಿಂದ ರಾಯಚೂರಲ್ಲೇ ಸಿಲುಕಿರುವ ಛತ್ತೀಸ್ಘಡ ಕಾರ್ಮಿಕರು: ತವರಿಗೆ ಕಳಿಸುವಂತೆ ಮನವಿ
ಕೊರೊನಾ ನಿಯಂತ್ರಿಸುವ ಸಲುವಾಗಿ ದೇಶದಾದ್ಯಂತ ಲಾಕ್‌ಡೌನ್ ನಿಯಮ ಜಾರಿ ಮಾಡಲಾಗಿದೆ. ಇದರಿಂದಾಗಿ ಹಲವರು ತಮ್ಮ ತವರೂರಿಗೆ ತೆರಳಲಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದೀಗ ಛತ್ತೀಸ್ಘಡದ ಕೂಲಿ ಕಾರ್ಮಿಕರು ರಾಯಚೂರಿನಲ್ಲಿ ಸಿಲುಕಿದ್ದು, ನಮಗೆ ಊರಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಿ ಎಂದು ಜಿಲ್ಲಧಿಕಾರಿಗೆ ಮನವಿ ಮಾಡಿದ್ದಾರೆ.
ಲಾಕ್ಡೌನ್ನಿಂದಾಗಿ ರಾಯಚೂರಲ್ಲೇ ಸಿಲುಕಿರುವ ಛತ್ತೀಸ್ಗಢ ಕಾರ್ಮಿಕರು
ಒಟ್ಟು 46 ಕಾರ್ಮಿಕರು ಛತ್ತೀಸ್ಘಡದಿಂದ ಬಂದಿದ್ದು, ಇದೀಗ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ನಮಗೆ ಊರಿಗೆ ತೆರಳುವ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದು, ಸದ್ಯ ಕಟ್ಟಡ ಕೆಲಸ ಮಾಡಿದ ಮಾಲೀಕರು ಊಟದ ವ್ಯವಸ್ಥೆ ಮಾಡಿದ್ದಾರೆ. ಆದರೆ ಊರಿಗೆ ತೆರಳಬೇಕಾದರೆ ಬಸ್, ರೈಲು ಬಂದ್ ಇರುವುದರಿಂದ ನಮಗೆ ಹೋಗೋಕೆ ಆಗುತ್ತಿಲ್ಲ ಅಂತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.