ರಾಯಚೂರು: ರಾಜ್ಯ ರಾಜಕಾರಣ ಪ್ರತಿಕ್ಷಣದ ಕ್ಷಿಪ್ರ ಬೆಳವಣಿಗೆ ಮಧ್ಯ ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ಅವರ ಹುಟ್ಟುಹಬ್ಬವನ್ನ ಬೆಂಗಳೂರಿನ ರೆಸಾರ್ಟ್ವೊಂದರಲ್ಲಿ ಆಚರಿಸಿಕೊಂಡರು.
ರಮಡ ರೆಸಾರ್ಟ್ನಲ್ಲಿ ಬಿಜೆಪಿ ಶಾಸಕನ ಬರ್ತ್ಡೇ ಸಂಭ್ರಮ..
ಮೈತ್ರಿ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದ್ರೇ ಅತ್ತ ಬಿಜೆಪಿ ಆರಾಮವಾಗಿ ಮೈತ್ರಿನಾಯಕರ ನಡೆಯನ್ನು ಲೆಕ್ಕಿಸದೆ ಬರ್ತ್ಡೇ ಸಂಭ್ರಮದಲ್ಲಿದ್ದಾರೆ.
ಇಂದು 42ನೇ ಹುಟ್ಟಹಬ್ಬದ ಸಂಭ್ರಮದಲ್ಲಿರುವ ಕೆ.ಶಿವನಗೌಡ ನಾಯಕ ಬೆಂಗಳೂರಿನ ರಮಡದ ರೆಸಾರ್ಟ್ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಶಾಸಕರ ಮಧ್ಯೆ ಕೇಕ್ ಕತ್ತರಿಸುವ ಮೂಲಕ ಬರ್ತ್ಡೇ ಆಚರಿಸಿಕೊಂಡರು. ಕೆ ಶಿವನಗೌಡ ನಾಯಕ ಕೆಲ ಬೆಂಬಲಿಗರು ರೆಸಾರ್ಟ್ಗೆ ಬಂದು ಶುಭಕೋರಿದರು.
ಆಗ ರೆಸಾರ್ಟ್ನಲ್ಲಿದ್ದ ಸಂಸದೆ ಶೋಭಾ ಕರಂದ್ಲಾಜೆ, ಕಾರವಾರ ಶಾಸಕಿ ರೂಪಾಲಿ ನಾಯ್ಕ್, ಹಿರಿಯೂರು ಶಾಸಕಿ ಕೆ.ಪೂರ್ಣಿಮ ಸೇರಿದಂತೆ ಇತರರು ಬರ್ತ್ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಂಸದೆ ಮತ್ತು ಶಾಸಕ ಶಿವನಗೌಡ ಬೆಂಬಲಿಗರು ಕೇಕ್ ತಿನ್ನಿಸುವ ಮೂಲಕ ಶುಭಾಶಯ ಕೋರಿದರು.ಬರ್ತ್ಡೇ ಸಂಭ್ರಮದ ಪೋಟೋಗಳನ್ನೂ ಸಹ ಸ್ವತಃ ಶಾಸಕ ಕೆ.ಶಿವನಗೌಡ ನಾಯಕ ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ ಇಟ್ಟುಕೊಂಡಿದ್ದಾರೆ.