ರಾಯಚೂರು: ಬಿಎ ಅಂತಿಮ ವರ್ಷದ ರಾಜ್ಯಶಾಸ್ತ್ರದ ಪ್ರಶ್ನೆ ಪತ್ರಿಕೆ ಬದಲಾಗಿರುವುದನ್ನ ಖಂಡಿಸಿ ವಿದ್ಯಾರ್ಥಿಗಳು ರಾಯಚೂರಿನ ಲಿಂಗಸೂಗೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯಶಾಸ್ತ್ರದ ಪ್ರಶ್ನೆ ಪತ್ರಿಕೆ ಬದಲು... ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು! - ವಿದ್ಯಾರ್ಥಿಗಳು
ನಿನ್ನೆ ನಡೆಯಬೇಕಾಗಿದ್ದ ಪ್ರಶ್ನೆ ಪತ್ರಿಕೆ ವಿತರಣೆ ಮಾಡುವ ಬದಲು ಬೇರೊಂದು ಪ್ರಶ್ನೆ ಪತ್ರಿಕೆ ನೀಡಿದ ಪರಿಣಾಮ ವಿದ್ಯಾರ್ಥಿಗಳು ಕೆಲಹೊತ್ತು ಪ್ರತಿಭಟನೆ ನಡೆಸಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ರಾಯಚೂರು ಜಿಲ್ಲೆಯಲ್ಲಿ ರಾಜ್ಯಶಾಸ್ತ್ರದ ಆಧುನಿಕ ಸರಕಾರ ಪರೀಕ್ಷೆ ನಿನ್ನೆ ಮಧ್ಯಾಹ್ನ ನಿಗದಿಯಾಗಿತ್ತು. ನಿಗಿದಿಗೊಂಡಿದ್ದ ವಿಷಯದ ಪ್ರಶ್ನೆ ಪತ್ರಿಕೆಯನ್ನ ವಿವಿ ರವಾನಿಸಬೇಕಾಗಿತ್ತು. ಅದರ ಬದಲಾಗಿ ಮೇ.18ರಂದು ನಿಗದಿಯಾದ ಸಾರ್ವಜನಿಕ ಆಡಳಿತ ವಿಷಯದ ಪ್ರಶ್ನೆ ರವಾನೆ ಮಾಡಿದೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರಶ್ನೆ ಪತ್ರಿಕೆ ಅದಲು-ಬದಲುಗೊಂಡ ಕಾರಣ, ಪರೀಕ್ಷಾ ಕೇಂದ್ರದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ವಿಶ್ವವಿದ್ಯಾಲಯದ ಅಧಿಕಾರಿಗಳು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಾಚಾರ್ಯರೊಂದಿಗೆ ಮಾತುಕತೆ ನಡೆಸಿ, ಬಳಿಕ ವಿವಿಯ ಪರೀಕ್ಷೆ ವಿಭಾಗದ ಮೇಲಾಧಿಕಾರಿಗಳ ಗಮನಕ್ಕೆ ತಂದು, ಪ್ರಶ್ನೆ ಪತ್ರಿಕೆಯನ್ನ ಈ-ಮೇಲ್ ಮೂಲಕ ತರಿಸಿಕೊಂಡು ಪರೀಕ್ಷೆಯನ್ನ ನಡೆಸಿದರು.