ರಾಯಚೂರು: ಲಿಂಗಸಗೂರು ನ್ಯಾಯಾಲಯದ ಬಳಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ನಾಲತವಾಡ ಗ್ರಾಮದ ಶಂಕರಲಿಂಗ ಎಂಬ ವ್ಯಕ್ತಿ ಕೋರ್ಟ್ ಮುಂದೆಯೇ ವಿಷ ಸೇವಿಸಿದ್ದಾನೆ. ಬಾಟಲಿಯಲ್ಲಿ ವಿಷ ತೆಗೆದುಕೊಂಡು ಹೋಗಿ ನ್ಯಾಯಾಲಯದ ಬಳಿ ವಿಷ ಸೇವಿಸಿದ್ದು, ಕೂಡಲೇ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಲಿಂಗಸಗೂರಿನಲ್ಲಿ ಕೋರ್ಟ್ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಲಿಂಗಸಗೂರು ನ್ಯಾಯಾಲಯದ ಬಳಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ನಾಲತವಾಡ ಗ್ರಾಮದ ಶಂಕರಲಿಂಗ ಎಂಬ ವ್ಯಕ್ತಿ ಕೋರ್ಟ್ ಮುಂದೆಯೇ ವಿಷ ಸೇವಿಸಿದ್ದಾನೆ.
ಲಿಂಗಸಗೂರಿನಲ್ಲಿ ಕೋರ್ಟ್ ಮುಂದೆಯೇ ಆತ್ಮಹತ್ಯೆಗೆ ಯತ್ನ
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಅಣ್ಣ ಸಾವಿಗೆ ಕಾರಣವೆಂದು ಡೆತ್ನೋಟ್ನಲ್ಲಿ ಬರೆದಿದ್ದಾನೆಂದು ಹೇಳಲಾಗುತ್ತಿದೆ. ಲಿಂಗಸಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಕರಣ ಇದುವರೆಗೆ ದಾಖಲಾಗಿಲ್ಲ.