ಕರ್ನಾಟಕ

karnataka

ETV Bharat / state

ಚರಂಡಿ ವಿಚಾರಕ್ಕೆ ಯೋಧನ ಮೇಲೆ ಹಲ್ಲೆ: ಕೇಸು ದಾಖಲು

ಚರಂಡಿ ವಿಚಾರಕ್ಕೆ ಯೋಧನ ಮೇಲೆ ಹಲ್ಲೆ ನಡೆಸಿದ 18 ಜನರ ಮೇಲೆ ಕೇಸು ದಾಖಲಾಗಿದೆ. ಪೊಲೀಸರು ಈಗಾಗಲೇ 6 ಜನರನ್ನು ಬಂಧಿಸಿದ್ದು, ಮುಖ್ಯ ಆರೋಪಿ ಸೇರಿದಂತೆ ಒಟ್ಟು 12 ಜನರನ್ನು ಬೇಗ ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ.

attack-on-a-soldier-for-drainage
ಚರಂಡಿ ವಿಚಾರಕ್ಕೆ ಯೋಧನ ಮೇಲೆ ಹಲ್ಲೆ : ಕೇಸು ದಾಖಲು

By

Published : Feb 19, 2022, 9:40 AM IST

ರಾಯಚೂರು : ಚರಂಡಿ ವಿಚಾರಕ್ಕೆ ಯೋಧನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನರ ಮೇಲೆ ಮೊಕದ್ದಮೆ ದಾಖಲಾಗಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಿಲೋಗಲ್ ಕ್ರಾಸ್ ನಲ್ಲಿ ಇತ್ತೀಚಿಗೆ‌ ಗ್ರಾಮದ ಮುಖಂಡ ಶರಣಪ್ಪಗೌಡ ಹಾಗೂ ಯೋಧ ಅಮರೇಶ ನಡುವೆ ಚರಂಡಿ ವಿಚಾರಕ್ಕೆ ಗಲಾಟೆ ನಡೆದಿತ್ತು.

ಈ ವೇಳೆ ಯೋಧ ಅಮರೇಶ ಮೇಲೆ ಹಲ್ಲೆ ನಡೆದಿದೆ ಎಂದು ದೂರಿದ್ದರು. ಗಲಾಟೆಯಲ್ಲಿ ಯೋಧನ ತಾಯಿ ಈರಮ್ಮ(78) ಮೃತಪಟ್ಟಿದ್ದರು. ಈ ಬಗ್ಗೆ ಶರಣಪ್ಪಗೌಡ ಹಾಗೂ ಆತನ ಹಿಂಬಾಲಕರ ವಿರುದ್ಧ ಹಟ್ಟಿ ಪೊಲೀಸ್ ಠಾಣೆ ದೂರು ನೀಡಲಾಗಿದ್ದು, ಜೊತೆಗೆ ಯೋಧನ ತಾಯಿಯನ್ನ ಕೊಲೆ ಮಾಡಲಾಗಿದೆ ಆರೋಪಿಸಲಾಗಿತ್ತು.

ಘಟನೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸರು ಶರಣಪ್ಪಗೌಡ ಸೇರಿದಂತೆ 18 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, 6 ಜನರನ್ನ ವಶಕ್ಕೆ ಪಡೆದಿದ್ದಾರೆ. ಮುಖ್ಯ ಆರೋಪಿ ಶರಣಪ್ಪಗೌಡ ಸೇರಿದಂತೆ ಇನ್ನುಳಿದ 12 ಜನರ ಬಂಧಿಸಲಾಗಿಲ್ಲ. ಹೀಗಾಗಿ ಮುಖ್ಯ ಆರೋಪಿ ಹಾಗೂ ಇನ್ನುಳಿದ ಆರೋಪಿಗಳನ್ನ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಓದಿ :ಯೂರೋಪ್​ನಲ್ಲಿ ಒಂದು ವಾರದಲ್ಲಿ ಎರಡನೇ ಚಂಡಮಾರುತ, 8 ಮಂದಿ ಸಾವು

ABOUT THE AUTHOR

...view details