ರಾಯಚೂರು:ಆಕಸ್ಮಿಕ ಬೆಂಕಿ ತಗುಲಿ ಮೂರು ಮೇವಿನ ಬಣವೆ ಭಸ್ಮಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಆಕಸ್ಮಿಕ ಬೆಂಕಿ ತಗುಲಿ 3 ಬಣವೆ ಭಸ್ಮ.. ಪ್ರಾಣಿಗಳು ತಿನ್ನೋ ಮೇವು ಸುಟ್ಟುಕರಕಲು
ತೀವ್ರ ಬರಗಾಲ ಹಿನ್ನೆಲೆಯಿಂದಾಗಿ ಜಾನುವಾರುಗಳಿಗೆ ಸಾವಿರಾರು ರೂ. ಖರ್ಚು ಮಾಡಿ ಮೇವಿನ ಬಣವೆಯನ್ನು ರೈತರು ಸಂಗ್ರಹಿಸಿದ್ದರು. ಆದರೆ, ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಬಣವೆಗಳು ಸುಟ್ಟುಕರಕಲಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಆಕಸ್ಮಿಕ ಬೆಂಕಿ ತಗುಲಿ ಮೂರು ಮೇವಿನ ಬಣವೆ ಭಸ್ಮ
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಡೋಣಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಚನ್ನಪ್ಪಗೌಡಗೆ ಸೇರಿದ 1 ಬಣವೆ ಮತ್ತು ಸಿದ್ದಯ್ಯ ಎನ್ನುವರಿಗೆ ಸೇರಿದ 2 ಬಣವೆಗಳು ಬೆಂಕಿಗೆ ಆಹುತಿಯಾಗಿವೆ.
ತೀವ್ರ ಬರಗಾಲ ಹಿನ್ನೆಲೆಯಿಂದಾಗಿ ಜಾನುವಾರುಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಮೇವಿನ ಬಣವೆಯನ್ನು ರೈತರು ಸಂಗ್ರಹಿಸಿದ್ದರು. ಆದರೆ, ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಬಣವೆಗಳು ಸುಟ್ಟುಕರಕಲಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ ಮೇವು ಎಲ್ಲಿಂದ ತರುವುದು ಎಂದು ಅಳಲು ತೋಡಿಕೊಂಡಿದ್ದಾರೆ. ಲಿಂಗಸಗೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Last Updated : May 11, 2019, 10:43 AM IST