ರಾಯಚೂರು:ತುಂಗಭದ್ರಾ ನದಿಯ ಪುಷ್ಕರ ಸ್ನಾನ ಹಿನ್ನೆಲೆ ತಾಲೂಕಿನ ಎಲೆಬಿಚ್ಚಾಲಿ ಗ್ರಾಮ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಅಗ್ನಿಶಾಮಕ ದಳದ ಬೋಟ್ ಪ್ರಾಯೋಗಿಕ ಸಮಯದಲ್ಲಿ ಕಲ್ಲುಗಳಿಗೆ ತಾಗಿ ಕೈಕೊಟ್ಟಿದ್ದರಿಂದ ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು.
ಪ್ರಾಯೋಗಿಕ ಸಂಚಾರ ಸಮಯದಲ್ಲಿ ನದಿಯ ಮಧ್ಯೆ ಕೈಕೊಟ್ಟ ಬೋಟ್: ಮುಂದೇನಾಯ್ತು?
ಎಲೆ ಬಿಚ್ಚಾಲಿ ಗ್ರಾಮದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರ ನಿರ್ಮಿಸಲಾಗಿರುವ ಸ್ನಾನ ಘಟ್ಟದಲ್ಲಿ ಅಗ್ನಿಶಾಮಕ ದಳದಿಂದ ಬೋಟ್ಗಳ ಪ್ರಾಯೋಗಿಕ ಸಂಚಾರ ಕೈಗೊಳ್ಳಲಾಗಿತ್ತು. ಈ ವೇಳೆ ಕಲ್ಲುಗಳು ತಾಗಿದ ಪರಿಣಾಮ ಮಧ್ಯೆದಲ್ಲಿ ನಿಂತುಕೊಂಡಿದ್ದವು. ಇದರಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಎಲೆ ಬಿಚ್ಚಾಲಿ ಗ್ರಾಮದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರ ನಿರ್ಮಿಸಲಾಗಿರುವ ಸ್ನಾನ ಘಟ್ಟದಲ್ಲಿ ಅಗ್ನಿಶಾಮಕ ದಳದ ಬೋಟ್ಗಳ ಪ್ರಾಯೋಗಿಕ ಸಂಚಾರ ಕೈಗೊಳ್ಳಲಾಗಿತ್ತು. ಈ ವೇಳೆ ಕಲ್ಲುಗಳು ತಾಗಿದ ಪರಿಣಾಮ ಮಧ್ಯೆದಲ್ಲಿ ನಿಂತುಕೊಂಡಿದ್ದವು. ಇದರಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇಂದಿನಿಂದ ಆರಂಭವಾದ ತುಂಗಭದ್ರಾ ಪುಷ್ಕರ ಹಿನ್ನೆಲೆ ಸುರಕ್ಷತಾ ಕ್ರಮಗಳ ಪೂರ್ವ ತಯಾರಿಯಿಂದ ಅಗ್ನಿಶಾಮಕ ದಳದ 7 ಜನ ಸಿಬ್ಬಂದಿ ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದ ಸಮಯದಲ್ಲಿ ಒಂದು ಬೋಟ್ ಕೈಕೊಟ್ಟಿತ್ತು. ನಂತರ ಗ್ರಾಮಸ್ಥರು ಹರಿಗೋಲು ಸಹಾಯದಿಂದ ಸಿಬ್ಬಂದಿ ಹತ್ತಿರ ತೆರಳಿ, ಬೋಟ್ ಅನ್ನು ದಡಕ್ಕೆ ಸೇರಿಸಿದ್ದಾರೆ.
TAGGED:
ತುಂಗಭದ್ರಾ ನದಿಯ ಪುಷ್ಕರ ಸ್ನಾನ