ಕರ್ನಾಟಕ

karnataka

By

Published : Sep 21, 2020, 6:55 PM IST

ETV Bharat / state

ರಾಯಚೂರು ಜಿಲ್ಲೆಯಲ್ಲಿಂದು 60 ಜನರಿಗೆ ಕೊರೊನಾ ದೃಢ

ರಾಯಚೂರು ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

Raichur
Raichur

​​​ರಾಯಚೂರು:ಜಿಲ್ಲೆಯಲ್ಲಿ ಇಂದು 60 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,507ಕ್ಕೆ ತಲುಪಿದೆ.

ಇಂದಿನ ತಾಲೂಕುವಾರು ಕೊರೊನಾ ವಿವರ:

ರಾಯಚೂರು ತಾಲೂಕಿನಲ್ಲಿ 24, ಮಾನವಿ 12, ಲಿಂಗಸೂಗೂರು 6, ಸಿಂಧನೂರು 14, ದೇವದುರ್ಗ 4 ಪ್ರಕರಣಗಳು ಇಂದು ಪತ್ತೆಯಾಗಿವೆ.

ಗುಣಮುಖ :

ಈವರಗೆ ಪತ್ತೆಯಾಗಿರುವ ಸೋಂಕಿತರಲ್ಲಿ 8,731 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 1,644 ಪ್ರಕರಣಗಳು ಸಕ್ರಿಯವಾಗಿವೆ.

ಮೃತರ ಮಾಹಿತಿ :

ಇಂದು ಇಬ್ಬರು ಮೃತಪಡುವ ಮೂಲಕ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 132ಕ್ಕೆ‌ ಏರಿಕೆಯಾಗಿದೆ.

ಇಂದು ಪತ್ತೆಯಾಗಿರುವ ರೋಗದ ಗುಣಲಕ್ಷಣದ ಆಧಾರದ ಮೇಲೆ ಸೋಂಕಿತರನ್ನು ಕ್ವಾರಂಟೈನ್ ಕೇಂದ್ರ, ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿ, ಸಂಪರ್ಕಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details