ರಾಯಚೂರು: ಬಿಸಿಲೂರಿಗರಿಗೆ ಕೊರೊನಾ ಸೋಂಕು ಮಹಾಮಾರಿಯಂತೆ ಹೆಗಲೇರಿದೆ. ಒಂದೇ ದಿನ 40 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26 ರಿಂದ 66ಕ್ಕೆ ಏರಿದೆ.
ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಕೊರೊನಾ: ರಾಯಚೂರಿನಲ್ಲಿ ಇಂದು 40 ಕೇಸ್ ಪತ್ತೆ! - ಕೋವಿಡ್-19
ವಲಸೆ ಕಾರ್ಮಿಕರಿಂದ ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನ 40 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 66ಕ್ಕೆ ಏರಿದೆ.
ರಾಯಚೂರು ಕೊರೊನಾ ಪ್ರಕರಣಗಳು
ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
Last Updated : May 23, 2020, 8:56 PM IST